ಕರ್ನಾಟಕ

karnataka

ಒಂದೇ ಬೆಡ್ ಮೇಲೆ ಇಬ್ಬರು ರೋಗಿಗಳಿಗೆ ಚಿಕಿತ್ಸೆ.. ಹುಬ್ಬಳ್ಳಿ ಕಿಮ್ಸ್ ಸಿಬ್ಬಂದಿ ವಿರುದ್ಧ ಎಡವಟ್ಟು ಆರೋಪ

By

Published : Apr 27, 2021, 9:13 PM IST

Updated : Apr 27, 2021, 9:26 PM IST

ಸಿಬ್ಬಂದಿ ದಿವ್ಯ ನಿರ್ಲಕ್ಷ್ಯದಿಂದ ಇಂತಹ ಅವ್ಯವಸ್ಥೆಗೆ ಸಾಕ್ಷಿಯಾಗಿದೆ. ಇಬ್ಬರೂ ವೃದ್ಧರಿಗೆ ಆಕ್ಸಿಜನ್ ನೀಡಿದರೂ ಕೂಡ ಮಾನವೀಯತೆ ಇಲ್ಲದೇ ಬೇಕಾಬಿಟ್ಟಿಯಾಗಿ ಒಂದೆ ಬೆಡ್ ಮೇಲೆ ಮಲಗಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

KIMS
ಒಂದೇ ಬೆಡ್ ಮೇಲೆ ಇಬ್ಬರು ರೋಗಿಗಳಿಗೆ ಚಿಕಿತ್ಸೆ

ಹುಬ್ಬಳ್ಳಿ: ಉತ್ತರ ಕರ್ನಾಟಕದ ಸಂಜೀವಿನಿ ಎಂದು ಕರೆಸಿಕೊಳ್ಳುವ ಕಿಮ್ಸ್ ಒಂದಿಲ್ಲೊಂದು ರೀತಿಯಲ್ಲಿ ಸುದ್ದಿಯಾಗುತ್ತಲೇ ಇದೆ. ಕೊರೊನಾ ವೈರಸ್ ನಿಯಂತ್ರಣಕ್ಕೆ ಹೋರಾಟ ನಡೆಸಿ ಹೆಸರಾಗಿರುವ ಕಿಮ್ಸ್ ಸಿಬ್ಬಂದಿ ಈಗ ಎಡವಟ್ಟು ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಜಿಲ್ಲೆಯಲ್ಲಿ ಯಾವುದೇ ರೀತಿಯಲ್ಲಿ ಬೆಡ್ ಕೊರತೆ ಇಲ್ಲ ಎಂದು ಜಿಲ್ಲಾಡಳಿತ, ಜನಪ್ರತಿನಿಧಿಗಳು ಹಾಗೂ ಕಿಮ್ಸ್ ಆಡಳಿತ ಮಂಡಳಿ ಹೇಳುತ್ತಿದ್ದಾರೆ. ಆದರೆ ಪ್ರಸ್ತುತ ಪರಿಸ್ಥಿತಿ ನೋಡಿದರೆ, ಅಧಿಕಾರಿಗಳು ಹಾಗೂ ‌ಜನಪ್ರತಿನಿಧಿಗಳ‌ ಹೇಳಿಕೆ ಮೇಲೆ ಅನುಮಾನ ಮೂಡುವಂತಿದೆ. ಏಕೆಂದರೆ ಒಂದೇ ಬೆಡ್​ ಮೇಲೆ ಇಬ್ಬರು ರೋಗಿಗಳನ್ನು ಮಲಗಿಸಿ ಚಿಕಿತ್ಸೆ ನೀಡಿದ್ದಾರೆ ಎನ್ನಲಾದ ಘಟನೆ ಕಿಮ್ಸ್ ಆಸ್ಪತ್ರೆಯ ಹಳೆಯ ತುರ್ತು ಚಿಕಿತ್ಸಾ ವಿಭಾಗದಲ್ಲಿ ನಡೆದಿದೆ.

ಒಂದೇ ಬೆಡ್ ನಲ್ಲಿ ಇಬ್ಬರು ರೋಗಿಗಳನ್ನು ಮಲಗಿಸಿದ್ದು, ಇಬ್ಬರೂ ರೋಗಿಗಳಿಗೆ ಆಕ್ಸಿಜನ್ ಕೂಡ ನೀಡಲಾಗಿದೆ. ಬೆಡ್ ಸಮಸ್ಯೆ ಇಲ್ಲ ಎಂದು ಹೇಳುವ ಕಿಮ್ಸ್ ಒಂದೇ ಬೆಡ್ ಮೇಲೆ ಇಬ್ಬರು ರೋಗಿಗಳನ್ನು ಹಾಕುವ ಮೂಲಕ ಎಡವಟ್ಟು ಮಾಡಿದೆ ಎನ್ನಲಾಗ್ತಿದೆ.

ಹುಬ್ಬಳ್ಳಿ ಕಿಮ್ಸ್ ಸಿಬ್ಬಂದಿಯ ಎಡವಟ್ಟು

ಸಿಬ್ಬಂದಿ ದಿವ್ಯ ನಿರ್ಲಕ್ಷ್ಯದಿಂದ ಇಂತಹ ಅವ್ಯವಸ್ಥೆಗೆ ಸಾಕ್ಷಿಯಾಗಿದೆ. ಇಬ್ಬರೂ ವೃದ್ಧರಿಗೆ ಆಕ್ಸಿಜನ್ ನೀಡಿದರೂ ಕೂಡ ಮಾನವೀಯತೆ ಇಲ್ಲದೇ ಬೇಕಾಬಿಟ್ಟಿಯಾಗಿ ಒಂದೆ ಬೆಡ್ ಮೇಲೆ ಮಲಗಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಕಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ಬರುವ ಜನರಲ್ಲಿ ಸಿಬ್ಬಂದಿ ವರ್ತನೆಗೆ ಆಕ್ರೋಶ ವ್ಯಕ್ತವಾಗಿದೆ. ಇನ್ನಾದರೂ ಆಡಳಿತ ಮಂಡಳಿ ಎಚ್ಚೆತ್ತುಕೊಂಡು ಅವ್ಯವಸ್ಥೆಯನ್ನು ಸರಿಪಡಿಸಬೇಕಿದೆ.

Last Updated : Apr 27, 2021, 9:26 PM IST

ABOUT THE AUTHOR

...view details