ಹುಬ್ಬಳ್ಳಿ:ಮಹಾನಗರ ಪಾಲಿಕೆಯ ಕಚೇರಿಯ ಪಕ್ಕದಲ್ಲಿರುವ ಮರವನ್ನು ಅರ್ಧಂಬರ್ಧ ಕಡಿದು ಹಾಗೇ ಬಿಟ್ಟಿರುವುದರಿಂದ ಸಾರ್ವಜನಿಕರು ಆತಂಕದಲ್ಲಿ ಓಡಾಡುವಂತಾಗಿದೆ.
ಹು-ಧಾ ಪಾಲಿಕೆಯ ಕಚೇರಿಯ ಪಕ್ಕದಲ್ಲಿ ಇರುವ ಉದ್ಯಾನವನದಲ್ಲಿ ಮರವೊಂದನ್ನು ಪೂರ್ತಿ ಕಡಿದು ಅಲ್ಲಿಂದ ತೆರವುಗೊಳಿಸದೆ, ಅರ್ಧಂಬರ್ಧ ಕಡಿದು ಅಲ್ಲಿಯೇ ಬಿಟ್ಟಿದ್ದಾರೆ. ಕಳೆದ ಕೆಲವು ದಿನಗಳಿಂದ ಮಳೆ ಜೋರಾಗಿ ಸುರಿಯುತ್ತಿದ್ದು, ಮರ ಯಾವಾಗ ಯಾರ ಮೇಲೆ ಬಿದ್ದು ಬಲಿ ತೆಗೆದುಕೊಳ್ಳುತ್ತದೋ ಎಂಬ ಆತಂಕ ಸೃಷ್ಟಿಯಾಗಿದೆ.