ಕರ್ನಾಟಕ

karnataka

ETV Bharat / state

ಹು-ಧಾ ಮಹಾನಗರ ಪಾಲಿಕೆಯಿಂದ ಶೇ. 5ರಷ್ಟು ಆಸ್ತಿ ತೆರಿಗೆ ಇಳಿಕೆ ನಿರ್ಧಾರ: ಈಟಿವಿ ಭಾರತ ಫಲಶೃತಿ - ಈಟಿವಿ ಭಾರತ

ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಆಸ್ತಿ ತೆರಿಗೆ ಹೆಚ್ಚಳ ಮಾಡಿದ್ದರ ಕುರಿತಾಗಿ ಈಟಿವಿ ಭಾರತ ಸುದ್ದಿ ಪ್ರಕಟಿಸಿತ್ತು. ಈ ವರದಿ ಬೆನ್ನಲ್ಲೇ, ಎಚ್ಚೆತ್ತುಕೊಂಡ ಪಾಲಿಕೆ ಶೇ. 5ರಷ್ಟು ಆಸ್ತಿ ತೆರಿಗೆ ಇಳಿಸಲು ಮುಂದಾಗಿದೆ.

ಶೇ. 5ರಷ್ಟು ಆಸ್ತಿ ತೆರಿಗೆ ಇಳಿಕೆ ನಿರ್ಧಾರ: ಈಟಿವಿ ಭಾರತ ಫಲಶೃತಿ
ಶೇ. 5ರಷ್ಟು ಆಸ್ತಿ ತೆರಿಗೆ ಇಳಿಕೆ ನಿರ್ಧಾರ: ಈಟಿವಿ ಭಾರತ ಫಲಶೃತಿ

By

Published : May 23, 2020, 1:26 PM IST

ಹುಬ್ಬಳ್ಳಿ: ಕೊರೊನಾ ಸಂಕಷ್ಟದ ಕಾಲದಲ್ಲೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಸ್ತಿ ತೆರಿಗೆಯನ್ನು ಹೆಚ್ಚಳ ಮಾಡಿದ್ದಕ್ಕೆ ಸಾರ್ವಜನಿಕರು ಹಾಗೂ ವಿವಿಧ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು. ಆದ್ದರಿಂದ ತೆರಿಗೆ ಕಡಿಮೆ ಮಾಡಿ ಪಾಲಿಕೆ ಶುಕ್ರವಾರ ಪರಿಷ್ಕೃತ ಆದೇಶ ಹೊರಡಿಸಿದೆ.

ಆಸ್ತಿ ತೆರಿಗೆ ಹೆಚ್ಚಳ ಕುರಿತು ಈಟಿವಿ ಭಾರತ ಸುದ್ದಿ ಪ್ರಕಟಿಸಿತ್ತು. ಹೀಗಾಗಿ ರಾಜ್ಯ ಸರ್ಕಾರ ಹೊಸದಾಗಿ ಅಧಿಸೂಚನೆ ಹೊರಡಿಸಿದ್ದು, ಪಾಲಿಕೆಯ ಎಲ್ಲ ಆಸ್ತಿ ತೆರಿಗೆಯಲ್ಲಿ ಶೇ.5ರಷ್ಟು ಕಡಿಮೆ ಮಾಡಲಾಗಿದ್ದು, ಸಾರ್ವಜನಿಕರಿಗೆ ಸ್ವಲ್ಪ ನಿರಾಳತೆ ಕೊಟ್ಟಂತಾಗಿದೆ. ಪರಿಷ್ಕೃತ ಆದೇಶ ಮೇ 25ರಿಂದ ಅನ್ವಯವಾಗಲಿದೆ.

ಶೇ. 5ರಷ್ಟು ಆಸ್ತಿ ತೆರಿಗೆ ಇಳಿಕೆ ನಿರ್ಧಾರ: ಈಟಿವಿ ಭಾರತ ಫಲಶೃತಿ

ಇತ್ತೀಚಿಗೆ ಹೆಚ್ಚಳ ಮಾಡಿದ್ದ ತೆರಿಗೆಯಲ್ಲಿ ವಾಣಿಜ್ಯ ಕಟ್ಟಡಗಳಿಗೆ ಶೇ.25, ವಸತಿ ಗೃಹ ಶೇ.20 ಮತ್ತು ಖಾಲಿ ನಿವೇಶನಗಳಿಗೆ ತೆರಿಗೆಯನ್ನು ಶೇ. 30ಕ್ಕೆ ಏರಿಸಲಾಗಿತ್ತು. ಇದನ್ನು ಹಲವಾರು ಜನ ವಿರೋಧಿಸಿದ್ದರು. ಅಲ್ಲದೇ ಪಾಲಿಕೆಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ತೆರಿಗೆ ಸಂಗ್ರಹ ವೇಗವಾಗಿ ಆಗಬೇಕಾದ ಅನಿವಾರ್ಯತೆಯಿದೆ. ಸಿಬ್ಬಂದಿ ವೇತನಕ್ಕೆ ಪ್ರತಿ ತಿಂಗಳು 6 ಕೋಟಿ, ವಾಹನಗಳ ನಿರ್ವಹಣೆ, ಇಂಧನ ಮತ್ತು ಇತರ ಕಾರ್ಯಗಳಿಗೆ ಸಾಕಷ್ಟು ಹಣ ಬೇಕಾಗುತ್ತದೆ. ಇದರಲ್ಲಿ ಶೇ.70ರಷ್ಟು ಹಣ ವಿವಿಧ ಯೋಜನೆಗಳ ಮೂಲಕ ಸರ್ಕಾರ ನೀಡುತ್ತದೆ. ಉಳಿದ ಶೇ.30ರಷ್ಟು ಹಣವನ್ನು ಪಾಲಿಕೆಯೇ ಹೊಂದಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ತೆರಿಗೆ ಹೆಚ್ಚಳ‌ ಮಾಡಲಾಗಿತ್ತು. ಈಗ ಶೇ 5 ರಷ್ಟು ಇಳಿಕೆ ಮಾಡಿದೆ.

ಇದನ್ನೂ ಓದಿ: ಆಸ್ತಿ ತೆರಿಗೆ ಹೆಚ್ಚಳ: ಅವಳಿ ನಗರದ ಜನತೆಗೆ ಬಿಗ್​​ ಶಾಕ್​ ಕೊಟ್ಟ ಮಹಾನಗರ ಪಾಲಿಕೆ!

ಪರಿಷ್ಕರಿಸಿದ ತೆರಿಗೆ ನಿಯಮ ಮೇ 25ರಿಂದ (ಸೋಮವಾರ) ಜಾರಿಗೆ ಬರಲಿದೆ. ಅವಳಿ ನಗರದಲ್ಲಿ ಆಸ್ತಿ ತೆರಿಗೆ ಪಾವತಿಸುವ ತೆರಿಗೆದಾರರು 2.59 ಲಕ್ಷ ಇದ್ದಾರೆ. ಈಗಾಗಲೇ ತೆರಿಗೆ ಕಟ್ಟಿದವರ ಹಣವನ್ನು ಮುಂದಿನ ವರ್ಷದ ತೆರಿಗೆಯಲ್ಲಿ ಸರಿದೂಗಿಸಲಾಗುತ್ತದೆ. 2020-21ರಲ್ಲಿ ತೆರಿಗೆ ಸಂಗ್ರಹವಾಗಿ ನಿರೀಕ್ಷೆ ಇರುವುದು ಅಂದಾಜು 83 ಕೋಟಿಯಾಗಿದೆ. 2019-20ರಲ್ಲಿ ಆಸ್ತಿ ಕರ ಸಂಗ್ರಹದ ನಿರೀಕ್ಷೆ ಇದ್ದದ್ದು 72 ಕೋಟಿ. ಸಂಗ್ರಹವಾಗಿದ್ದು 57 ಕೋಟಿ. ಈ ಬಾರಿ ತೆರಿಗೆಯನ್ನು 44,558 ಜನರು ಪಾವತಿಸಿದ್ದಾರೆ. ಇದುವರೆಗೆ ಸಂಗ್ರಹವಾದ ಆಸ್ತಿ ತೆರಿಗೆ ಒಟ್ಟು 13.23 ಕೋಟಿಯಾಗಿದ್ದು, ಕಳೆದ ವರ್ಷ ಏಪ್ರಿಲ್‌ ಹಾಗೂ ಮೇ ವೇಳೆಗೆ 25 ಕೋಟಿ ಆಸ್ತಿ ತೆರಿಗೆ ಸಂಗ್ರಹವಾಗಿತ್ತು. ಈ ಬಾರಿ ಮೇ 31ರ ವೇಳೆಗೆ 20 ಕೋಟಿ ತೆರಿಗೆ ಸಂಗ್ರಹವಾಗುವ ನಿರೀಕ್ಷೆಯಿದೆ.

ABOUT THE AUTHOR

...view details