ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ಕೆಲ ತಾಲೂಕುಗಳಲ್ಲಿ ಕಳೆದ ಮೂರು ದಿನಗಳಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಜಿಲ್ಲೆಯ ವಿವಿಧೆಡೆ ಅಪಾರ ಪ್ರಮಾಣ ಬೆಳೆ ಹಾನಿಯೊಂದಿಗೆ ಹಲವೆಡೆ ಮನೆಗಳು ಸಹ ಕುಸಿದು ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಧಾರವಾಡ ಜಿಲ್ಲೆಯಲ್ಲಿ ಧಾರಾಕಾರ ಮಳೆಗೆ ನೆಲಸಮವಾದ ಮನೆಗಳು - ಧಾರವಾಡ ಜಿಲ್ಲೆಯಲ್ಲಿ ಧಾರಕಾರ ಮಳೆ
ಕುಂದಗೋಳ ತಾಲೂಕಿನ ಹಲವು ಗ್ರಾಮಗಳಲ್ಲಿ ಸತತವಾಗಿ ಸುರಿದ ಮಳೆಗೆ 35ಕ್ಕೂ ಅಧಿಕ ಮನೆಗಳು ನೆಲಕಚ್ಚಿವೆ.
ಕುಂದಗೋಳ ತಾಲೂಕಿನ ಗುಡೇನಕಟ್ಟಿ, ಹಿರೇಹರಕುಣಿ ಗ್ರಾಮದಲ್ಲಿ 35ಕ್ಕೂ ಹೆಚ್ಚು ಮನೆಗಳ ಗೋಡೆ, ಮಾಳಿಗೆ ಕುಸಿತವಾಗಿವೆ. ಹೀಗಾಗಿ ಮಳೆಯಿಂದ ಕುಂದಗೋಳ ತಾಲೂಕಿನ ಜನರು ಸಂಕಷ್ಟ ಅನುಭವಿಸುವಂತಾಗಿದೆ.
ಕುಂದಗೋಳ, ಕಲಘಟಗಿ ತಾಲೂಕು ಸೇರಿದಂತೆ ಹುಬ್ಬಳ್ಳಿ ಮಹಾನಗರದಲ್ಲೂ ಕಳೆದ ಮೂರು ದಿನಗಳಿಂದ ಸುರಿದ ಮಳೆಗೆ ಹಲವು ಮನೆಗಳು ಭಾಗಶಃ ಜಖಂಗೊಡಿವೆ. ಅಲ್ಲದೆ ಕಳೆದ ವರ್ಷವೂ ಸಹ ಈ ಪ್ರದೇಶಗಳಲ್ಲಿ ಸಾಕಷ್ಟು ಮನೆಗಳು ನೆಲಸಮವಾಗಿದ್ರು ಇನ್ನೂ ಅನೇಕರಿಗೆ ಪರಿಹಾರ ದೊರೆತಿಲ್ಲ. ಹೀಗಾಗಿ ಕೂಡಲೇ ಜಿಲ್ಲಾಡಳಿತ ಮತ್ತು ಸರ್ಕಾರ ಹಾನಿಗೊಳಗಾದ ಮನೆಗಳ ಸಮೀಕ್ಷೆ ನಡೆಸಿ ಪರಿಹಾರ ನೀಡಬೇಕೆಂದು ಜನರು ಆಗ್ರಹಿಸುತ್ತಿದ್ದಾರೆ.