ಧಾರವಾಡ:ಗಂಗಾ ಪಾಸಲಕರ ಎಂಬುವವರು ವಾಣಿಜ್ಯ ಕಟ್ಟಡ ನಿರ್ಮಾಣಕ್ಕಾಗಿ ಅಡಿಪಾಯ ಹಾಕುತ್ತಿದ್ದರು. ಈ ವೇಳೆ ಕಟ್ಟಡದ ಅಡಿಪಾಯ ಹಾಕಲು ಸ್ಥಳವನ್ನು ಅಗೆದ ಹಿನ್ನೆಲೆಯಲ್ಲಿ ಪಕ್ಕದ ಮನೆಯವರ ಮನೆಯ ಒಂದು ಭಾಗದ ಗೋಡೆ ಕುಸಿದು ಬಿದ್ದಿದೆ.
ಕಟ್ಟಡ ನಿರ್ಮಾಣಕ್ಕೆ ಅಡಿಪಾಯ ಹಾಕುವ ವೇಳೆ ಕುಸಿದ ಪಕ್ಕದ ಮನೆ ಗೋಡೆ - undefined
ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ ಅಡಿಪಾಯ ಹಾಕುವಾಗ ಪಕ್ಕದ ಮನೆಯವರ ಗೋಡೆ ಕುಸಿದು ಬಿದ್ದಿರುವ ಘಟನೆ ಧಾರವಾಡದ ವಿದ್ಯಾಗಿರಿಯಲ್ಲಿ ಸಂಭವಿಸಿದೆ.
ಧಾರವಾಡ
ಶ್ರೀಕಾಂತ ದೇವಗಿರಿ ಎಂಬುವವರಿಗೆ ಸೇರಿದ ಮನೆ ಇದಾಗಿದ್ದು, ಕಳೆದ ತಿಂಗಳು ಸಹ ಇದೇ ಮನೆಯ ಮತ್ತೊಂದು ಭಾಗದ ಗೋಡೆ ಕುಸಿದು ಬಿದ್ದಿತ್ತು. ಈಗ ಇನ್ನೊಂದು ಭಾಗದ ಗೋಡೆಗೂ ಧಕ್ಕೆಯಾಗಿ ಇದು ಸಹ ಕುಸಿದು ಬಿದ್ದಿದೆ. ಒಂದೇ ತಿಂಗಳಲ್ಲಿ ಈ ರೀತಿಯ ಘಟನೆ ಎರಡು ಬಾರಿ ನಡೆದಿದೆ. ಈ ಸಂಬಂಧ ವಿದ್ಯಾಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated : Jun 9, 2019, 7:20 PM IST