ಕರ್ನಾಟಕ

karnataka

ETV Bharat / state

ಹೊರ ರಾಜ್ಯದಿಂದ ಮರಳಿದವರಿಗೆ ಹಾಸ್ಟೆಲ್​ ವ್ಯವಸ್ಥೆ : ಶೆಟ್ಟರ್​ - ಜಗದೀಶ ಶೆಟ್ಟರ್ ಸುದ್ದಿ

ಹೊರ ರಾಜ್ಯಗಳಿಂದ ರಾಜ್ಯಕ್ಕೆ ಮರಳಿದವರಿಗೆ ಅಂತಾನೇ ಹುಬ್ಬಳ್ಲಿಯ ಜಿಲ್ಲೆಯ 9 ಹಾಸ್ಟೆಲ್​ಗಳನ್ನ ಗುರುತಿಸಲಾಗಿದೆ ಎಂದು ಬೃಹತ್, ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ ಶೆಟ್ಟರ್ ತಿಳಿಸಿದ್ದಾರೆ.

Hostel system for those returning from outer state
ಬೃಹತ್, ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ ಶೆಟ್ಟರ್

By

Published : Mar 29, 2020, 7:13 PM IST

ಹುಬ್ಬಳ್ಳಿ : ಹೊರ ರಾಜ್ಯಗಳಿಗೆ ದುಡಿಯಲು ಹಾಗೂ ವ್ಯಾಸಂಗಕ್ಕಾಗಿ ಹೋದವರು ಮರಳಿ ತಮ್ಮ ಊರುಗಳಿಗೆ ಹೋಗುತ್ತಿದ್ದಾರೆ. ಇಂತಹವರಿಗೆ ಅವರು ಇರುವ ಸ್ಥಳದಲ್ಲಿಯೇ ಊಟ, ಉಪಹಾರ ಹಾಗೂ ವಾಸ್ತವ್ಯದ ಏರ್ಪಾಡು ಮಾಡಲು ಜಿಲ್ಲೆಯಲ್ಲಿ 9 ಹಾಸ್ಟೆಲ್​​ಗಳನ್ನ ಗುರುತಿಸಲಾಗಿದೆ ಎಂದು ಬೃಹತ್, ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ ಶೆಟ್ಟರ್ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕೊರೊನಾ ಸೋಂಕು ತಡೆಯಲು ಘೋಷಿಸಿರುವ ಲಾಕ್ ಡೌನ್ ನಿಂದ ವಲಸೆ ಕಾರ್ಮಿಕರು ಹಾಗೂ ವಿದ್ಯಾರ್ಥಿಗಳಿಗೆ ಎದುರಾಗಬಹುದಾದ ಸಮಸ್ಯೆಗಳನ್ನು ಮನಗಂಡು ಅವುಗಳ ಪರಿಹಾರಕ್ಕೆ ಜಿಲ್ಲಾ ಹಂತದ ಸಮಿತಿಯನ್ನು ರಚಿಸಲಾಗಿದೆ. ಸಮಿತಿಯು ಊಟ, ಉಪಹಾರ ಹಾಗೂ ವಸತಿ ವ್ಯವಸ್ಥೆಗಳಿಗಾಗಿ ಜಿಲ್ಲೆಯ 9 ಹಾಸ್ಟೆಲಗಳನ್ನು ಗುರುತಿಸಿದೆ. ಪ್ರತಿ ಹಾಸ್ಟೇಲಿಗೆ ಇಬ್ಬರು ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ.

ಧಾರವಾಡದ ಸಪ್ತಾಪೂರ ಹಾಗೂ ದೊಡ್ಡನಾಯಕನ ಕೊಪ್ಪದಲ್ಲಿರುವ ಮೆಟ್ರಿಕ್ ನಂತರದ ವಸತಿ ನಿಲಯಗಳು, ಅಳ್ನಾವರದ ಕಸ್ತೂರಬಾ ಗಾಂಧಿ ವಸತಿ ಶಾಲೆ, ಹುಬ್ಬಳ್ಳಿಯ ಶಿರಡಿನಗರ ಹಾಗೂ ತಾರಿಹಾಳದಲ್ಲಿರುವ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯಗಳು, ಕಲಘಟಗಿಯ ಮಿಶ್ರಿಕೋಟಿಯಲ್ಲಿರುವ ಮೆಟ್ರಿಕ್ ನಂತರದ ವಸತಿ ನಿಲಯ, ಕುಂದಗೋಳದ ಎಸ್.ಟಿ. ಬಾಲಕಿಯರ ವಸತಿ ನಿಲಯ, ನವಲಗುಂದ ಪಟ್ಟಣ ಹಾಗೂ ಜಾವೂರು ಗ್ರಾಮದಲ್ಲಿರುವ ಮೆಟ್ರಿಕ್ ಪೂರ್ವ ಹಾಸ್ಟೆಲ್​​​​ಗಳಲ್ಲಿ ವಲಸಿಗರ ವಾಸ್ತವ್ಯಕ್ಕಾಗಿ ಅನುಕೂಲ ಕಲ್ಪಿಸಿಕೊಡಲಾಗಿದೆ.

ABOUT THE AUTHOR

...view details