ಕರ್ನಾಟಕ

karnataka

ETV Bharat / state

ಲಿಂಗಾಯತರಿಗೆ ಶೇ. 16% ರಷ್ಟು ಮೀಸಲಾತಿ ನೀಡಲು ರಾಜ್ಯ ಸರ್ಕಾರಕ್ಕೆ ಹೊರಟ್ಟಿ ಪತ್ರ

ರಾಜ್ಯದ ಜನಸಂಖ್ಯೆಯಲ್ಲಿ ವೀರಶೈವ ಲಿಂಗಾಯತರ ಸಂಖ್ಯೆ ಹೆಚ್ಚಿದ್ದು, ಮಹಾರಾಷ್ಟ್ರ ಸರ್ಕಾರವು ಪ್ರವರ್ಗ 3ಬಿಯಲ್ಲಿರುವ ಸಮಸ್ತ ಮರಾಠಾ ಸಮುದಾಯಕ್ಕೆ ಶೇ 16% ವಿಶೇಷ ಮೀಸಲಾತಿ ಮಾದರಿಯಲ್ಲಿ ಕುಲಶಾಸ್ತಿಯ ಅಧ್ಯಯನಕ್ಕೆ ಕರ್ನಾಟಕದಲ್ಲಿ ಲಿಂಗಾಯತರಿಗೆ ಶೇ. 16% ರಷ್ಟು ಮೀಸಲಾತಿ ನೀಡಬೇಕು ಎಂದು ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

By

Published : Jan 16, 2020, 9:13 PM IST

ಹೊರಟ್ಟಿ ಪತ್ರ
ಹೊರಟ್ಟಿ ಪತ್ರ

ಹುಬ್ಬಳ್ಳಿ:ಮಹಾರಾಷ್ಟ್ರ ಸರ್ಕಾರವು ಪ್ರವರ್ಗ 3ಬಿಯಲ್ಲಿರುವ ಸಮಸ್ತ ಮರಾಠಾ ಸಮುದಾಯಕ್ಕೆ ನೀಡಿರುವ ಶೇ 16% ವಿಶೇಷ ಮೀಸಲಾತಿ ಮಾದರಿಯಲ್ಲಿ ರಾಜ್ಯದ ಲಿಂಗಾಯತ ಸಮುದಾಯಕ್ಕೆ ಶೇ16% ಮೀಸಲಾತಿ ನೀಡಬೇಕೆಂದು ವಿಧಾನ ಪರಿಷತ್ ಸದಸ್ಯ, ಮಾಜಿ ಸಭಾಪತಿ ಬಸವರಾಜ ಹೊರಟ್ಟಿಯವರು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ಇತ್ತೀಚೆಗೆ ಮಹಾರಾಷ್ಟ್ರ ಸರ್ಕಾರ ಪ್ರವರ್ಗ 3ಬಿಯಲ್ಲಿರುವ ಅಲ್ಲಿಯ ಬಹುಸಂಖ್ಯಾತ ಮರಾಠಾ ಸಮಾಜಕ್ಕೆ ಆಗಿನ ಶೇ 52% ಮೀಸಲಾತಿಯಲ್ಲಿ ಯಾವುದೇ ಕಡಿತಗೊಳಿಸದೇ ಶೇ 16% ರಷ್ಟು ವಿಶೇಷ ಮೀಸಲಾತಿಯನ್ನು ಡಿಸೆಂಬರ್ 1 ರಿಂದ ಜಾರಿಗೆ ಬರುವಂತೆ ಮೀಸಲಾತಿ ಪ್ರಮಾಣವನ್ನು ಶೇ 68% ರಷ್ಟು ಏರಿಕೆ ಮಾಡಿ ಸರ್ವಾನುಮತದಿಂದ ಜಾರಿಗೆ ತಂದಿದೆ. ದೇಶದ ಸರ್ವೋಚ್ಛ ನ್ಯಾಯಾಲಯವು 2010 ರಂದು ನೀಡಿದ ಆದೇಶದಂತೆ ಖಚಿತ ವೈಜ್ಞಾನಿಕ ದಾಖಲೆಗಳು ಇದ್ದಲ್ಲಿ ಸರ್ಕಾರವು ಮೀಸಲು ಪ್ರಮಾಣವನ್ನು ಶೇ 50% ಕ್ಕಿಂತ ಹೆಚ್ಚಿಸಬಹುದು ಎಂಬ ಆದೇಶದ ಹಿನ್ನಲೆಯಲ್ಲಿ ಮಹಾರಾಷ್ಟ್ರ ಸರ್ಕಾರ ಅಲ್ಲಿಯ ಬಹುಸಂಖ್ಯಾತ ಹಿಂದೂ ಮರಾಠಾ ಸಮಾಜಕ್ಕೆ ಈ ಕೊಡುಗೆಯನ್ನು ನೀಡಿದೆ.

ಲಿಂಗಾಯತರಿಗೆ ಶೇ. 16% ರಷ್ಟು ಮೀಸಲಾತಿ ನೀಡುವಂತೆ ಹೊರಟ್ಟಿ ಪತ್ರ
ವೀರಶೈವ ಲಿಂಗಾಯತರ ಸಂಖ್ಯೆ ಹೆಚ್ಚಿದ್ದು 16% ರಷ್ಟು ಮೀಸಲಾತಿ ನೀಡಬೇಕೆಂದು ಸಿಎಂಗೆ ಪತ್ರ
ಈಗಿರುವ ಶೇ 50% ಮೀಸಲಾತಿ ಕಡಿತಗೊಳಿಸದೆ ಇನ್ನೂ ಶೇ 16% ರಷ್ಟು ಏರಿಸುವಂತೆ ಒತ್ತಾಯ

ಕರ್ನಾಟಕ ರಾಜ್ಯದ ಬಹುಸಂಖ್ಯಾತ ಪ್ರವರ್ಗ 3ಬಿ ಯಲ್ಲಿರುವ ಸಮಸ್ತ ಲಿಂಗಾಯತ ಸಮಾಜಕ್ಕೆ ಈಗಿರುವ ಶೇ 50% ರಷ್ಟು ಮೀಸಲಾತಿಯಲ್ಲಿ ತಾವು ಕಡಿತಗೊಳಿಸದೆ ಮಹಾರಾಷ್ಟ್ರ ಮಾದರಿಯಲ್ಲಿಯ ಶೇ 16% ರಷ್ಟು ವಿಶೇಷ ಮೀಸಲಾತಿಯನ್ನು ಜಾರಿಗೆ ತಂದು ಮೀಸಲಾತಿಯ ಮಿತಿಯನ್ನು ಶೇ 66% ರಷ್ಟು ಮಾಡಬೇಕೆಂದು ರಾಜ್ಯದ ಸಮಸ್ತ ಲಿಂಗಾಯತ ಸಮಾಜದ ವತಿಯಿಂದ ತಮ್ಮಲ್ಲಿ ವಿನಂತಿಸುತ್ತೇನೆ ಎಂದು ಬಸವರಾಜ ಹೊರಟ್ಟಿ ರಾಜ್ಯ ಸರ್ಕಾರಕ್ಕೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ABOUT THE AUTHOR

...view details