ಹುಬ್ಬಳ್ಳಿ:ಏನಾದರೂ ಪವಾಡ ಆದರೆ ಎಚ್.ಡಿ. ಕುಮಾರಸ್ವಾಮಿ ಮತ್ತೆ ಕಿಂಗ್ ಮೇಕರ್ ಆಗುತ್ತಾರೆ ಅಂದಿದ್ದೆ. ಅದಕ್ಕೆ ನನ್ನ ತಲೆ ಕೆಟ್ಟಿದೆ ಎಂದು ಜಗದೀಶ್ ಶೆಟ್ಟರ್ ಹೇಳಿದ್ದರು. ನನ್ನ ತಲೆ ಕೆಟ್ಟಿಲ್ಲಾ ಎಂದು ಶೆಟ್ಟರ್ಗೆ ತಿಳಿಸಲು ಮಾಧ್ಯಮದ ಮುಂದೆ ಬಂದಿದ್ದೇನೆ ಎಂದು ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹಾಸ್ಯಾಸ್ಪದವಾಗಿ ಹೇಳಿದರು.
ಬಸವರಾಜ್ ರಾಜ ಹೊರಟ್ಟಿ, ಜಗದೀಶ್ ಶೆಟ್ಟರ್ ಜಂಟಿ ಹೇಳಿಕೆ ನಗರದ ಖಾಸಗಿ ಹೊಟೇಲ್ನಲ್ಲಿ ನಡೆದ ಸಿಎಂ ಬಿಎಸ್ವೈ ಮೊಮ್ಮಗಳ ನಾಮಕರಣ ಸಮಾರಂಭದಲ್ಲಿ ಪಾಲ್ಗೊಂಡು ನಂತರ ಸಚಿವ ಜಗದೀಶ್ ಶೆಟ್ಟರ್ ಹಾಗೂ ಬಸವರಾಜ ಹೊರಟ್ಟಿ ಸ್ವಾರಸ್ಯಕರ ಚರ್ಚೆ ಜೊತೆಗೆ ಜಂಟಿ ಹೇಳಿಕೆ ನೀಡಿದರು. ಈ ವೇಳೆ ಸಚಿವ ಜಗದೀಶ್ ಶೆಟ್ಟರ್ ಮಾತನಾಡಿ, ನನಗೆ ಗೊತ್ತಾದ ಅರ್ಧ ಸತ್ಯದ ಮೇಲೆ ಆ ರೀತಿಯಾಗಿ ಪ್ರತಿಕ್ರಿಯೆ ನೀಡಿದ್ದೆ ಎಂದು ಸ್ಪಷ್ಟನೆ ನೀಡಿದರು.
ಇದನ್ನೂ ಓದಿ: ಹೆಚ್ಡಿಕೆ ಕಿಂಗ್ ಮೇಕರ್ ಆಗೋದನ್ನ ಕಾಯ್ತೇವೆ: ಹೊರಟ್ಟಿ ಹೇಳಿಕೆಗೆ ಶೆಟ್ಟರ್ ಟಾಂಗ್
ಇನ್ನು ಬಸವರಾಜ ಹೊರಟ್ಟಿ ಮಾತನಾಡಿ, ಯಡಿಯೂರಪ್ಪ, ಸಿದ್ದರಾಮಯ್ಯ, ಶೆಟ್ಟರ್ ನನಗೆ ಪಕ್ಷಾತೀತವಾಗಿ ಆತ್ಮೀಯರು. ಅಲ್ಲದೆ ಜಗದೀಶ್ ಶೆಟ್ಟರ್ ನನ್ನನ್ನು ಬಿಜೆಪಿಗೆ ಆಹ್ವಾನಿಸಿಲ್ಲ. ಎಂದರು. ಇದಕ್ಕೆ ಪ್ರತಿಯಾಗಿ ಮಾತನಾಡಿದ ಶೆಟ್ಟರ್, ವಿಧಾನ ಪರಿಷತ್ನಲ್ಲಿ ಹೊರಟ್ಟಿಯವರು ದಾಖಲೆ ಮಾಡಿದ್ದಾರೆ. ಅವರು ಬಿಜೆಪಿಗೆ ಬಂದ್ರೆ ಸ್ವಾಗತಿಸುತ್ತೇವೆ ಎಂದರು. ಈ ವೇಳೆ ಹೊರಟ್ಟಿ ಮಾತನಾಡಿ, ಜಗದೀಶ್ ಶೆಟ್ಟರ್ ಸರಿಯಾದ ಜಾಗದಲ್ಲಿ ಇದ್ದಾರೆ. ನಮ್ಮಂತವರನ್ನು ಪಕ್ಷಕ್ಕೆ ಸೇರಿಸಿಕೊಂಡ್ರೆ ಅಭದ್ರರಾಗುವುದು ಬೇಡಾ. ಅವರ ಪ್ರೀತ ವಿಶ್ವಾಸಕ್ಕೆ ಧನ್ಯವಾದಗಳು. ಸದ್ಯಕ್ಕೆ ಯಾವುದೇ ತಿರ್ಮಾನಕ್ಕೆ ಬರಲ್ಲಾ. ಚುನಾವಣೆಯಿಂದ ದೂರ ಉಳಿಯಲು ಚಿಂತನೆ ನಡೆಸಿದ್ದೇನೆ. ನನಗೆ ರಾಜಕೀಯದಲ್ಲಿ ಹೆಚ್ಚಿನ ಅಧಿಕಾರದ ಆಸೆ ಉಳಿದಿಲ್ಲ. ಆ ಹಿನ್ನೆಲೆಯಲ್ಲಿ ಯಡಿಯೂರಪ್ಪ, ಸಿದ್ದರಾಮಯ್ಯ ನನಗೆ ಜೆಡಿಎಸ್ ಬಿಟ್ಟು ಬರಲು ಆಹ್ವಾನ ನೀಡಿದರೂ ಕೂಡಾ, ನಾನು ಬಂದಿಲ್ಲ. ಸದ್ಯಕ್ಕೆ ಜೆಡಿಎಸ್ ಬಿಡಲ್ಲಾ. ಪಕ್ಷ ಬಿಡುವ ವಿಚಾರದ ಕುರಿತು ಜಗದೀಶ್ ಶೆಟ್ಟರ್ ಜೊತೆ ಮಾತನಾಡಿದ್ದು, ಹೆಚ್.ಡಿ.ದೇವೆಗೌಡರಿಗೆ ಗೊತ್ತಾದ್ರೆ ಫೋನ್ ಮಾಡುತ್ತಾರೆ ಎಂದು ನಗುತ್ತಾ ಹೇಳಿದರು.