ಕರ್ನಾಟಕ

karnataka

ETV Bharat / state

ಹುಬ್ಬಳ್ಳಿಯಲ್ಲಿ ಹುಕ್ಕಾ ಬಾರ್​ ಮೇಲೆ ದಾಳಿ: 5 ಲಕ್ಷ ರೂ. ಮೌಲ್ಯದ ವಸ್ತುಗಳು ವಶ - ಹುಕ್ಕಾ ಬಾರ್​ ಮೇಲೆ ದಾಳಿ

ಹುಬ್ಬಳ್ಳಿಯಲ್ಲಿ ಅನುಮತಿ ಇಲ್ಲದೆ ಹುಕ್ಕಾ ಸೇವನೆಗೆ ಅವಕಾಶ ನೀಡುತ್ತಿದ್ದ ಬಾರ್‌ ಒಂದರ ಮೇಲೆ ಪಾಲಿಕೆ ಆರೋಗ್ಯಾಧಿಕಾರಿ ಮತ್ತು ಜಿಲ್ಲಾ ಕೋಟ್ಪಾ ಅಧಿಕಾರಿಗಳ ತಂಡ ದಾಳಿ ನಡೆಸಿ 5 ಲಕ್ಷ ರೂಪಾಯಿ ಅಧಿಕ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

Hookah bar raid in Hubli
ಹುಬ್ಬಳ್ಳಿಯಲ್ಲಿ ಹುಕ್ಕಾ ಬಾರ್​ ಮೇಲೆ ದಾಳಿ : 5ಲಕ್ಷ ರೂ. ಮೌಲ್ಯದ ವಸ್ತುಗಳು ವಶ

By

Published : Dec 25, 2019, 11:00 AM IST

ಹುಬ್ಬಳ್ಳಿ: ಅನುಮತಿ ಇಲ್ಲದೆ ಹುಕ್ಕಾ ಸೇವನೆಗೆ ಅವಕಾಶ ನೀಡುತ್ತಿದ್ದ ಬಾರ್‌ ಒಂದರ ಮೇಲೆ ಪಾಲಿಕೆ ಆರೋಗ್ಯಾಧಿಕಾರಿ ಮತ್ತು ಜಿಲ್ಲಾ ಕೋಟ್ಪಾ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಈ ವೇಳೆ 5 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡು ಬಾರ್‌ಗೆ ಬೀಗ ಹಾಕಿದ್ದಾರೆ.

ಹೊಸೂರಿನ ಹೊಸ ಕೋರ್ಟ್‌ ಹಿಂಭಾಗದ ನಗರದ ತಿಮ್ಮಸಾಗರ ಬಡಾವಣೆಯಲ್ಲಿ ಅರ್ಬನ್‌ ರೂಟ್ಸ್‌ ಹೆಸರಿನಲ್ಲಿ ಕೇಶ್ವಾಪುರದ ಜಯಶೀಲ ಬಾಲ್ಮಿ ಮತ್ತು ನರೇಂದ್ರ ತಿಕಂದರ ಅವರು ಅನಧಿಕೃತವಾಗಿ ಬಾರ್‌ ನಡೆಸುತ್ತಿದ್ದರು. ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಅಧಿಕಾರಿಗಳು, 15 ಹುಕ್ಕಾ ಪೈಪ್‌, 20 ಹುಕ್ಕಾ ಸ್ಟ್ಯಾಂಡ್‌, ವಿವಿಧ ಫ್ಲೇವರ್ಸ್‌, ವಿಸಲಾ ಫ್ಲೇವರ್ಸ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಕುರಿತು ಮಾತನಾಡಿದ ಪಾಲಿಕೆ ಆರೋಗ್ಯಾಧಿಕಾರಿ ಡಾ. ಪ್ರಭು ಬಿರದಾರ, ಪಾಲಿಕೆಯಿಂದ ಯಾವುದೇ ಅನುಮತಿ ಇಲ್ಲದೆ ಇಬ್ಬರು ಎರಡು ತಿಂಗಳಿನಿಂದ ಹುಕ್ಕಾ ಬಾರ್‌ ನಡೆಸುತ್ತಿದ್ದರು. ಅಲ್ಲದೆ, ಪರವಾನಗಿ ಪಡೆಯದೇ ಹೋಟೆಲ್‌ ಸಹ ನಡೆಸುತ್ತಿದ್ದರು. ಕೋಟ್ಪಾ ಕಾಯ್ದೆ ಉಲ್ಲಂಘನೆ ಮಾಡುತ್ತಿರುವವರ ಕುರಿತು ಸಾರ್ವಜನಿಕರಿಂದ ದೂರು ಬಂದಿತ್ತು. ಪರಿಶೀಲನೆ ನಡೆಸಿದಾಗ, ಕಾನೂನು ಉಲ್ಲಂಘನೆ ಮಾಡಿರುವುದು ಕಂಡು ಬಂದಿದೆ’ ಎಂದರು.

ಹುಕ್ಕಾ ಬಾರ್‌ ನಡೆಸಲು ಅನುಮತಿ ನೀಡುವಂತೆ ಸಮಾರು 50 ಅರ್ಜಿಗಳು ಬಂದಿವೆ. ಯಾರೊಬ್ಬರಿಗೂ ಅನುಮತಿ ನೀಡಿಲ್ಲ. ಹುಕ್ಕ ಸೇದುವುದರಿಂದ ಆರೋಗ್ಯಕ್ಕೆ ಯಾವುದೇ ಹಾನಿಯಿಲ್ಲ ಎಂದು ಪ್ರಚಾರ ಮಾಡುತ್ತಿದ್ದಾರೆ. ಹುಕ್ಕಾದಲ್ಲಿ ನೂರಾರು ಬಗೆಯ ವಿಷಕಾರಿ ರಾಸಾಯನಿಕಗಳು ಇರುತ್ತವೆ ಎಂದರು. ಕಾರ್ಯಾಚರಣೆಯಲ್ಲಿ ಜಿಲ್ಲಾ ಕೋಟ್ಪಾ ಸಲಹೆಗಾರ ಎಂ.ಐ. ಕಲ್ಲಪ್ಪನವರ, ತಾಲ್ಲೂಕು ಆರೋಗ್ಯ ನಿರೀಕ್ಷಕ ಜಿ.ವಿ. ಓಂಕಾರ ಗೌಡರ ಇದ್ದರು.

ABOUT THE AUTHOR

...view details