ಕರ್ನಾಟಕ

karnataka

ETV Bharat / state

ಜೇನುಗೂಡಿಗೆ ಕಿಡಿಗೇಡಿಗಳಿಂದ ಕಲ್ಲು?: ವೃದ್ಧ ಸೇರಿ ಆರು ಜನರಿಗೆ ಗಾಯ - ಹೆಜ್ಜೇನು ದಾಳಿ ಧಾರವಾಡ ಸುದ್ದಿ

ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ವಿದ್ಯಾರ್ಥಿಗಳು ಸೇರಿದಂತೆ ವೃದ್ದರೊಬ್ಬರ ಮೇಲೆ ಹೆಜ್ಜೇನುಗಳು ದಾಳಿ ಮಾಡಿದ ಘಟನೆ ಸಂಭವಿಸಿದೆ.

ಗಾಯಗೊಂಡ ವಯೋವೃದ್ಧ

By

Published : Nov 17, 2019, 5:28 PM IST

ಧಾರವಾಡ: ವಿದ್ಯಾರ್ಥಿಗಳು ಸೇರಿದಂತೆ ವೃದ್ಧರೊಬ್ಬರು ಹೆಜ್ಜೇನು ದಾಳಿಗೆ ತುತ್ತಾದ ಘಟನೆ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಸಂಭವಿಸಿದೆ.

ಹೆಜ್ಜೇನು ದಾಳಿಯಲ್ಲಿ ಗಾಯಗೊಂಡ ವೃದ್ದರೊಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಐವರು ವಿದ್ಯಾರ್ಥಿಗಳು ಸೇರಿ ಒಟ್ಟು 6 ಮಂದಿಯ ಮೇಲೆ ಹೆಜ್ಜೇನು ದಾಳಿ ಮಾಡಿದೆ. ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಬಸನಗೌಡ ಪಾಟೀಲ್ ಎಂಬ ವೃದ್ದನಿಗೆ ಗಂಭೀರ ಸ್ವರೂಪದ ಗಾಯಗಳಾಗಿದೆ. ಅವರು ಸದ್ಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜೇನುಗೂಡಿಗೆ ಕಿಡಿಗೇಡಿಗಳು ಕಲ್ಲೆಸೆದಿದ್ದರಿಂದ ರೊಚ್ಚಿಗೆದ್ದಿರುವ ಹೆಜ್ಜೇನುಗಳು ದಾಳಿ ನಡೆಸಿವೆ ಎನ್ನಲಾಗಿದೆ.

ಇಂದು ಭಾನುವಾರವಾಗಿದ್ದರಿಂದ ವಿಶ್ವವಿದ್ಯಾಲಯಕ್ಕೆ ರಜೆ ಇದ್ದ ಕಾರಣ ಸಂಭವಿಸಬಹುದಾದ ದೊಡ್ಡ ಅನಾಹುತ ತಪ್ಪಿ ಹೋಗಿದೆ.

ABOUT THE AUTHOR

...view details