ಹುಬ್ಬಳ್ಳಿ: ಮಂಟೂರು ರಸ್ತೆಯ ಭಾರತಿ ನಗರದ ಸೈಯದ್ ಸಲೀಂ ನವಲೂರು ಎಂಬುವವರ ಮನೆ ಬಾಗಿಲು ಮುರಿದು, ಟ್ರಜರಿಯಲ್ಲಿದ್ದ ₹4.42 ಲಕ್ಷ ಮೌಲ್ಯದ ಬಂಗಾರದ ಆಭರಣಗಳು ಹಾಗೂ ₹70 ಸಾವಿರ ನಗದು ಕಳವು ಮಾಡಿರುವ ಘಟನೆ ನಡೆದಿದೆ.
ಮನೆ ಬಾಗಿಲು ಮುರಿದು ₹4.42 ಲಕ್ಷ ಮೌಲ್ಯದ ಬಂಗಾರದ ಆಭರಣ ಕಳವು
ನಗರದ ಸೈಯದ್ ಸಲೀಂ ನವಲೂರು ಎಂಬುವವರ ಮನೆ ಬಾಗಿಲು ಮುರಿದು ₹4.42 ಲಕ್ಷ ಮೌಲ್ಯದ ಬಂಗಾರದ ಆಭರಣ ಕಳವು ಮಾಡಿ ಖದೀಮರು ಪರಾರಿಯಾಗಿದ್ದಾರೆ.
ಕಳವು
ಇನ್ನೂ ₹28 ಸಾವಿರದ ಕಿವಿಯೋಲೆ, ₹1.20 ಲಕ್ಷದ ನೆಕ್ಲೆಸ್, ₹80ಸಾವಿರ ಮೌಲ್ಯದ ಉಂಗುರಗಳು ಸೇರಿದಂತೆ ಒಟ್ಟು 111 ಗ್ರಾಂ ಬಂಗಾರದ ಆಭರಣಗಳನ್ನು ಖದೀಮರು ಕಳವು ಮಾಡಿ ಪರಾರಿಯಾಗಿದ್ದಾರೆ.
ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.