ಹುಬ್ಬಳ್ಳಿ: ಹೋಂ ಕ್ವಾರೆಂಟೈನ್ (ಮನೆಯಲ್ಲೇ ಪ್ರತ್ಯೇಕ ಕೊಠಡಿಯಲ್ಲಿ ವಿಶೇಷ ನಿಗಾ) ನಲ್ಲಿದ್ದ ವ್ಯಕ್ತಿಯೊಬ್ಬ ಮನೆಯಿಂದ ಹೊರಗಡೆ ಬಂದಿದ್ದರಿಂದ ಸಾರ್ವಜನಿಕರು ಆತಂಕಗೊಂಡ ಘಟನೆ ಕುಂದಗೋಳ ಪಟ್ಟಣದಲ್ಲಿ ನಡೆದಿದೆ.
ಕೈ ಮ್ಯಾಲ ಸೀಲ್ ಇದ್ರೂ ಅವ ಊರೆಲ್ಲಾ ಸುತ್ತಾಡಕತ್ತಾನಾ...! ಕುಂದಗೋಳ ಜನರ ಆತಂಕ - corona effect in kundagola
ಕೈಗೆ ಸಿ ಕೆಟಗರಿ ಸೀಲ್ ಹಾಕಿದ್ರೂ ಕೂಡ ವ್ಯಕ್ತಿಯೊಬ್ಬ ಸಾರ್ವಜನಿಕ ಸ್ಥಳದಲ್ಲಿ ಓಡಾಡಿ ಜನರ ನೆಮ್ಮದಿ ಕೆಡಿಸಿದ ಘಟನೆ ನಡೆಯಿತು.
ಕೈ ಮೇಲೆ ಸೀಲ್ ಇದ್ರು ಊರೇಲ್ಲಾ ಸುತ್ತಾಡಿದ....ಆತಂಕದಲ್ಲಿ ಕುಂದಗೋಳ ಜನತೆ
ಕೈಗೆ ಸಿ ಕೆಟಗೆರಿ ಸೀಲ್ ಹಾಕಿದ್ರೂ ಕೂಡ ವ್ಯಕ್ತಿಯೊಬ್ಬ ಸಾರ್ವಜನಿಕ ಸ್ಥಳದಲ್ಲಿ ಓಡಾಡುತ್ತಿದ್ದುದನ್ನು ಕಂಡ ಜನರು ಆರೋಗ್ಯ ಇಲಾಖೆಗೆ ಮಾಹಿತಿ ಮುಟ್ಟಿಸಿದ್ದಾರೆ. ವಿಷಯ ತಿಳಿದ ಕೂಡಲೇ ಎಚ್ಚೆತ್ತುಕೊಂಡ ಆರೋಗ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕಾಗಮಿಸಿ ಆತನಿಗೆ ಮನೆಯೊಳಗಿರುವಂತೆ ಖಡಕ್ ಸೂಚನೆ ನೀಡಿದರು. ಇದರಿಂದ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟರು.