ಧಾರವಾಡ: ಬ್ರಿಟನ್ ಕೊರೊನಾ ಭೀತಿ ಧಾರವಾಡ ಜಿಲ್ಲೆಗೂ ಎದುರಾಗಿದೆ. ಡಿಸೆಂಬರ್ 21ರವರೆಗೆ ಬ್ರಿಟನ್ನಿಂದ ಧಾರವಾಡ ಜಿಲ್ಲೆಗೆ ಐದು ಜನರು ಆಗಮಿಸಿದ್ದು, ಅವರನ್ನು ಹೋಂ ಕ್ವಾರಂಟೈನ್ಗೆ ಒಳಪಡಿಸಲಾಗಿದೆ.
ಬ್ರಿಟನ್ನಿಂದ ಧಾರವಾಡಕ್ಕೆ ಆಗಮಿಸಿರುವ ಐದು ಮಂದಿಗೆ ಹೋಂ ಕ್ವಾರಂಟೈನ್ - Home Quaraentin
ಬ್ರಿಟನ್ನಲ್ಲಿ ಕೊರೊನಾ ರೂಪಾಂತರ ಭೀತಿ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಬ್ರಿಟನ್ನಿಂದ ಧಾರವಾಡಕ್ಕೆ ಬಂದವರನ್ನು ಈಗಾಗಲೇ ಹೋಂ ಕ್ವಾರಂಟೈನ್ ಮಾಡಿರುವುದಾಗಿ ಜಿಲ್ಲಾಧಿಕಾರಿ ನಿತೇಶ್ ಕೆ. ಪಾಟೀಲ್ ತಿಳಿಸಿದ್ದಾರೆ.
ಧಾರವಾಡ
ಈ ಎಲ್ಲಾ ಐದು ಜನರ ಮೂಗು ಮತ್ತು ಗಂಟಲು ದ್ರವದ ಮಾದರಿಯನ್ನು ಆರ್ಟಿಪಿಸಿಆರ್ ಪರೀಕ್ಷೆಗೆ ಒಳಪಡಿಸಲಾಗಿದೆ. ಇಂದು ರಾತ್ರಿ ಅವರೆಲ್ಲರ ತಪಾಸಣೆ ವರದಿಗಳು ದೊರೆಯಲಿವೆ.
ಈಗಾಗಲೇ ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಐದು ಜನರನ್ನು ಹೋಂ ಕ್ವಾರಂಟೈನ್ನಲ್ಲಿ ಇರಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಕೆ. ಪಾಟೀಲ್ ತಿಳಿಸಿದ್ದಾರೆ.