ಕರ್ನಾಟಕ

karnataka

ETV Bharat / state

ಮಂಗಳೂರಿನ‌ ವಿಮಾನ‌‌ ನಿಲ್ದಾಣದಲ್ಲಿ ಬಾಂಬ್ ಇರುವ ಸಂಶಯ :ಬಸವರಾಜ್ ಬೊಮ್ಮಾಯಿ‌ - ಬಸವರಾಜ್ ಬೊಮ್ಮಾಯಿ‌ ಹೇಳಿಕೆ

ಮಂಗಳೂರಿನ‌ ವಿಮಾನ‌‌ ನಿಲ್ದಾಣದ  ಹೊರಭಾಗದ ಪ್ರಯಾಣಿಕರ ವಿಶ್ರಾಂತಿ ಜಾಗದಲ್ಲಿ  ಸ್ಫೋಟಕ ವಸ್ತು ಪತ್ತೆ ಆಗಿದ್ದು, ಬಾಂಬ್ ಇರುವ ಸಂಶಯ ವ್ಯಕ್ತವಾಗಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ‌ ಹೇಳಿದರು.

Home minister Basavraj Bommai
ಬಸವರಾಜ್ ಬೊಮ್ಮಾಯಿ‌

By

Published : Jan 20, 2020, 2:30 PM IST

ಹುಬ್ಬಳ್ಳಿ: ಮಂಗಳೂರಿನ‌ ವಿಮಾನ‌‌ ನಿಲ್ದಾಣದ ಹೊರಭಾಗದ ಪ್ರಯಾಣಿಕರ ವಿಶ್ರಾಂತಿ ಜಾಗದಲ್ಲಿ ಸ್ಫೋಟಕ ವಸ್ತು ಪತ್ತೆ ಆಗಿದ್ದು, ಬಾಂಬ್ ಇರುವ ಸಂಶಯ ವ್ಯಕ್ತವಾಗಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ‌ ಹೇಳಿದರು.

ಬಸವರಾಜ್ ಬೊಮ್ಮಾಯಿ‌

ಹುಬ್ಬಳ್ಳಿ ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ‌ ಅವರು, ಈ ಬಗ್ಗೆ ಮೊದಲ ಹಂತದ ತನಿಖೆಯಾಗುತ್ತಿದೆ.‌ ಈ ರೀತಿ ಭಯ ಹುಟ್ಟಿಸುವ ಪ್ರಕ್ರಿಯೆ ಮೇಲಿಂದ ಮೇಲೆ ನಡೆಯುತ್ತಿವೆ. ಈ ರೀತಿಯ ಪ್ರಯತ್ನ ಹತ್ತಿಕ್ಕಲು ನಾವು ಕಟ್ಟೆಚ್ಚರ ವಹಿಸಿದ್ದೇವೆ ಎಂದರು.

ಮಂಗಳೂರು, ಬೆಂಗಳೂರು, ಹುಬ್ಬಳ್ಳಿ ಏರ್​ಪೋರ್ಟ್​ನಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆಗಳನ್ನ ಇನ್ನಷ್ಟು ಹೆಚ್ಚಿಸಲಾಗಿದೆ. ಒಟ್ಟಾರೆಯಾಗಿ ಇದು ದೇಶದ್ರೋಹದ ಕೆಲಸ. ಈ ಪ್ರಕರಣವನ್ನು ಶೀಘ್ರದಲ್ಲೇ ಭೇದಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ABOUT THE AUTHOR

...view details