ಹುಬ್ಬಳ್ಳಿ:ಇಂದಿನಿಂದ ರಾಜ್ಯಾದ್ಯಂತ ನೈಟ್ ಕರ್ಫ್ಯೂ ಜಾರಿ ಹಿನ್ನೆಲೆ, ಸಾರ್ವಜನಿಕರಿಗೆ ಕರ್ಫ್ಯೂದಿಂದ ತೊಂದರೆ ಆಗುವುದು ಸಹಜ. ಆದರೆ, ಸಾರ್ವಜನಿಕರು ದಿನದ ಕೆಲ ಗಂಟೆ ಕೊರೊನಾದಿಂದ ದೂರವಿರಬೇಕು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ನಗರದಲ್ಲಿಂದು ಮಾತನಾಡಿದ ಅವರು, ಸಾರ್ವಜನಿಕರಿಗೆ ಹಾಗೂ ಅಗತ್ಯ ಸೇವೆಗಳಿಗೆ ತೊಂದರೆ ಆಗಬಾರದು. ಅದನ್ನ ಗಮನದಲ್ಲಿಟ್ಟುಕೊಂಡು ನೈಟ್ ಕರ್ಫ್ಯೂ ಜಾರಿ ಮಾಡಿದ್ದೇವೆ. ಜನವರಿ 2ರ ವರೆಗೆ ಮಾತ್ರ ಈ ನೈಟ್ ಕರ್ಫ್ಯೂ ಇರಲಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದರು.