ಕರ್ನಾಟಕ

karnataka

ETV Bharat / state

ಡಿಕೆಶಿ ಬಂಧನವನ್ನು ರಾಜಕೀಯ ಪ್ರೇರಿತ ಅನ್ನೋದೇ ರಾಜಕೀಯ: ಬಸವರಾಜ್​​​ ಬೊಮ್ಮಾಯಿ

ಡಿಕೆಶಿ ಪ್ರಕರಣದ ಕುರಿತು ಎರಡೂವರೆ ವರ್ಷದಿಂದ ಕೋರ್ಟ್​ನಲ್ಲಿ ವಿಚಾರಣೆ ನಡೆದಿತ್ತು. ಡಿಕೆಶಿ ಬಂಧನವನ್ನು ರಾಜಕೀಯ ಪ್ರೇರಿತ ಅನ್ನೋದೇ ರಾಜಕೀಯ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಗೃಹ ಸಚಿವ ಬಸವರಾಜ್ ಬೊಮ್ಮಾಯಿ

By

Published : Sep 5, 2019, 11:00 AM IST

ಹುಬ್ಬಳ್ಳಿ: ಡಿ.ಕೆ.ಶಿವಕುಮಾರ್​​ ಬಂಧನ ಪ್ರಕರಣದಿಂದ ನಮಗೆ ಖುಷಿ, ಸಂತೋಷದ ಪ್ರಶ್ನೆಯೇ ಇಲ್ಲ. ಕಾನೂನು ಕಾಪಡಬೇಕಲ್ವಾ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದರು.

ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಡಿಕೆಶಿ ಬಂಧನವನ್ನು ರಾಜಕೀಯ ಪ್ರೇರಿತ ಅನ್ನೋದೇ ರಾಜಕೀಯ. ಮೊನ್ನೆ ರಾತ್ರಿಯಿಂದ ಅಹಿತಕರ ಘಟನೆಗಳು ನಡೆದಿವೆ. ರಾಜ್ಯದಲ್ಲಿ ಸಾರ್ವಜನಿಕರಿಗೆ ತೊಂದರೆ ಆಗದಂತೆ ಕ್ರಮ ಕೈಗೊಂಡಿದ್ದೇವೆ. ರಾಮನಗರ, ಕನಕಪುರ ಪರಿಸ್ಥಿತಿ ಹತೋಟಿಗೆ ಬಂದಿದೆ. ಡಿಕೆಶಿ ಪ್ರಕರಣದ ಕುರಿತು ಎರಡೂವರೆ ವರ್ಷದಿಂದ ಕೋರ್ಟ್​ನಲ್ಲಿ ವಿಚಾರಣೆ ನಡೆದಿದೆ ಎಂದರು.

ಗೃಹ ಸಚಿವ ಬಸವರಾಜ್ ಬೊಮ್ಮಾಯಿ

ಉತ್ತರ ಕರ್ನಾಟಕ ಭಾಗದಿಂದ ಸೆಟಲೈಟ್ ಕರೆಗಳು ಹೋಗಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬೆಳಗಾವಿ ಜಿಲ್ಲೆ, ಉತ್ತರ ಕನ್ನಡ ಕಾಡಿನಿಂದ ಅನುಮಾನಾಸ್ಪದ ಕೆಲ ಕರೆಗಳು ಹೋಗಿವೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ತನಿಖೆ ಬಳಿಕ ವಾಸ್ತವ ಬೆಳಕಿಗೆ ಬರಲಿದೆ.‌ ಈ ಬಗ್ಗೆ ತನಿಖೆ ನಡೆಯಲಿದೆ. ತನಿಖೆ ಪೂರ್ಣಗೊಂಡ ಮೇಲೆ ನಾನೇ ಮಾಹಿತಿ ನೀಡುತ್ತೇನೆ ಎಂದರು.

ABOUT THE AUTHOR

...view details