ಕರ್ನಾಟಕ

karnataka

ETV Bharat / state

ಆರಗ ಜ್ಞಾನೇಂದ್ರ ಬೇಜವಾಬ್ದಾರಿ ಸಚಿವ: ಸಿದ್ದರಾಮಯ್ಯ - Siddaramaiah spoke about the Hubli riot

ಕೆಲ ಸಂಘಟನೆಗಳನ್ನು ಬ್ಯಾನ್ ಮಾಡೋ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಿಜೆಪಿಯವರಿಗೆ ಧಮ್ ಇದ್ರೆ ಎಸ್​​ಡಿಪಿಐ, ಎಂಐಎಂ, ಆರ್​ಎಸ್​ಎಸ್​, ಭಜರಂಗದಳ ಸೇರಿದಂತೆ ಕೆಲ ಸಂಘಟನೆಗಳನ್ನು ಬ್ಯಾನ್ ಮಾಡಲಿ ಎಂದು ಸಿದ್ದರಾಮಯ್ಯ ಬಿಜೆಪಿಗೆ ಸವಾಲು ಹಾಕಿದ್ದಾರೆ.

home minister Araga Jnanendra is a Irresponsible ministers: Siddaramaiah
home minister Araga Jnanendra is a Irresponsible ministers: Siddaramaiah

By

Published : Apr 22, 2022, 8:02 PM IST

ಹುಬ್ಬಳ್ಳಿ: ಹುಬ್ಬಳ್ಳಿ ಗಲಭೆಯನ್ನು ನಾನು ಖಂಡಿಸಿದ್ದೇನೆ. ಗೃಹ ಸಚಿವ ಆರಗ ಜ್ಞಾನೇಂದ್ರ ಬೇಜವಾಬ್ದಾರಿ ಸಚಿವ. ಅವರು ಗೃಹ ಸಚಿವರಾಗೋದಕ್ಕೆ ಅನ್‌ಫಿಟ್. ಕೂಡಲೇ ಗೃಹಮಂತ್ರಿ ರಾಜೀನಾಮೆ ನೀಡಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದ್ದಾರೆ.

ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಘಟನೆಯ ಹಿಂದೆ ಕಾಂಗ್ರೆಸ್ ಕೈವಾಡವಿದೆ ಅನ್ನೋ ಬಿಜೆಪಿ ಅರೋಪಕ್ಕೆ ಪ್ರತಿಕ್ರಿಯಿಸಿ, ಬಿಜೆಪಿ ನಾಯಕರಲ್ಲಿ ಸಾಕ್ಷಿ ಇದೆಯಾ ಎಂದು ಪ್ರಶ್ನಿಸಿದರು. ಕೆಲ ಸಂಘಟನೆಗಳನ್ನು ಬ್ಯಾನ್ ಮಾಡೋ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಿಜೆಪಿಯವರಿಗೆ ಧಮ್ ಇದ್ರೆ ಎಸ್​​ಡಿಪಿಐ, ಎಂಐಎಂ, ಆರ್​ಎಸ್​ಎಸ್​, ಭಜರಂಗದಳ ಸೇರಿದಂತೆ ಕೆಲ ಸಂಘಟನೆಗಳನ್ನು ಬ್ಯಾನ್ ಮಾಡಲಿ. ಯಾರು ತಪ್ಪು ಮಾಡಿದ್ದಾರೋ ಅವರ ಮೇಲೆ ಕ್ರಮ ಕೈಗೊಳ್ಳಲಿ ಎಂದರು.


ಇದನ್ನೂ ಓದಿ:ಹುಬ್ಬಳ್ಳಿ ಗಲಭೆ: ವಾಸೀಂ ಪಠಾಣ್ 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ

ಪಿಎಸ್ಐ ನೇಮಕಾತಿ ಸಂಬಂಧ ಅಕ್ರಮದಲ್ಲಿ ಯಾರೇ ಭಾಗಿಯಾಗಿದ್ರೂ ಕೂಡಲೇ ಕ್ರಮ‌ ಕೈಗೊಳ್ಳಬೇಕು. ಕಾನೂನಿನ ರೀತ್ಯ ಬಂಧನ ಮಾಡಬೇಕು. ಈ ಘಟನೆ ಜಾಮೀನು ರಹಿತ ಅಪರಾಧ ಎಂದು ಹೇಳಿದರು.

For All Latest Updates

TAGGED:

ABOUT THE AUTHOR

...view details