ನವಲಗುಂದ: ತಾಲೂಕಿನ ಪಡೇಸೂರ ಗ್ರಾಮದಲ್ಲಿ ಸುರಿದ ಮಹಾಮಳೆಗೆ ಮನೆಯೊಂದು ಕುಸಿದು ಬಿದ್ದಿದೆ. ಈ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಭೇಟಿ ನೀಡಿದ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ, ಕುಸಿತ ಕಂಡ ಮನೆಯನ್ನು ಪರಿಶೀಲಿಸಿದರು.
ಮಹಾಮಳೆಗೆ ಪಡೇಸೂರ ಗ್ರಾಮದಲ್ಲಿ ಮನೆ ಕುಸಿತ; ಪರಿಹಾರದ ಭರವಸೆ ನೀಡಿದ ಶಾಸಕ - Home fell down due to heavy rain
ಪಡೇಸೂರ ಗ್ರಾಮದಲ್ಲಿ ಸುರಿದ ಮಹಾ ಮಳೆಯಿಂದ ಮನೆಯೊಂದು ಕುಸಿದಿದ್ದು, ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಕುಸಿತ ಕಂಡ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಪರಿಹಾರ ಒದಗಿಸುವ ಭರವಸೆ ನೀಡಿದರು.
Home fell down due to heavy rain
ಬಳಿಕ ಕುಟುಂಬಸ್ಥರಿಗೆ ಧೈರ್ಯ ಹೇಳಿದ ಶಾಸಕರು, ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ತ್ವರಿತ ಗತಿಯಲ್ಲಿ ಪರಿಹಾರ ದೊರಕಿಸಲು ಕ್ರಮ ಕೈಗೊಳ್ಳಲು ಸೂಚಿಸಿದರು. ಈ ವೇಳೆ ಅಧಿಕಾರಿಗಳು, ಪಡೇಸೂರು ಗ್ರಾಮಸ್ಥರು ಇದ್ದರು.