ಕರ್ನಾಟಕ

karnataka

ETV Bharat / state

ಪುಂಡರ ಮೋಜು ಮಸ್ತಿಗೆ ಯುವಕ ಬಲಿ: ಪ್ರಭಾವಿಗಳ ಒತ್ತಡಕ್ಕೆ ಮಣಿದ್ರಾ ಹುಬ್ಬಳ್ಳಿ ಪೊಲೀಸರು? - Hit and run case

ಹುಬ್ಬಳ್ಳಿಯ ಸಿದ್ದೇಶ್ವರ ಸರ್ಕಲ್​ನ​​ಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಬನಶಂಕರಿ ಬಡಾವಣೆಯ ಗಣೇಶ ಬಣಗಣ್ಣನವರ್ ಮೃತಪಟ್ಟಿದ್ದಾರೆ.

Youth dies in Hubli
ಶ್ರೀಮಂತರ ಮಕ್ಕಳ ಮೋಜು ಮಸ್ತಿಗೆ ಯುವಕ ಬಲಿ

By

Published : Sep 28, 2022, 1:45 PM IST

ಹುಬ್ಬಳ್ಳಿ:ಅದು ಭೀಕರ ರಸ್ತೆ ಅಪಘಾತ. ಆ ಅಪಘಾತದಲ್ಲಿ ಅಮಾಯಕ ಯುವಕನೊಬ್ಬ ಜೀವ ಕಳೆದುಕೊಂಡಿದ್ದಾರೆ. ಪ್ರಕರಣ ಸಂಬಂಧ ಸೂಕ್ತ ಸಾಕ್ಷಿಗಳಿದ್ದರೂ ಸಹ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.

ಪ್ರಕರಣದ ವಿವರ:ಕಳೆದ ಭಾನುವಾರ ಉಣಕಲ್ ಸಮೀಪ ಸಿದ್ದೇಶ್ವರ ಸರ್ಕಲ್​ನಲ್ಲಿ ಬೆಳಗಿನ ಜಾವ ಸುಮಾರು 2 ಗಂಟೆ ಸುಮಾರಿಗೆ ನಡೆದ ಹಿಟ್ ಆ್ಯಂಡ್ ರನ್ ಕೇಸ್​ನಲ್ಲಿ ಯುವಕನೊಬ್ಬ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ವಿದ್ಯಾನಗರದ ಬನಶಂಕರಿ ಬಡಾವಣೆ ನಿವಾಸಿ ಗಣೇಶ ಬಣಗಣ್ಣನವರ್ ಮೃತರು.

ಅಪಘಾತದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಅಪಘಾತದ ನಂತರ ಪ್ರತಿಷ್ಠಿತ ಉದ್ಯಮಿಯ ಮಗ ತನ್ನ ಕಾರು ಬಿಟ್ಟು ಮತ್ತೊಂದು ಕಾರು ಹತ್ತಿ ಪರಾರಿಯಾಗಿದ್ದಾರೆ. ಆದರೂ ದೂರಿನಲ್ಲಿ ಡ್ರೈವರ್ ಎಂದು ಉಲ್ಲೇಖಿಸಿಲಾಗಿದೆ.

ಜತೆಗೆ ಎಫ್​ಐಆರ್ ದಾಖಲಾಗಿದ್ದರೂ ಕೂಡ ಪೊಲೀಸರು ಅಪಘಾತ ಮಾಡಿದ ಉದ್ಯಮಿಯ ಮಗನ ಬಗ್ಗೆ ಹಾಗೂ ಕಾರು ಚಾಲನೆ ಮಾಡಿದವರ ಬಗ್ಗೆ ಯಾವುದೇ ಮಾಹಿತಿ ಹಾಕಿಲ್ಲ ಎಂಬ ಆರೋಪಗಳಿವೆ.

ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿರುವುದು..

ಅಮಾಯಕನ ಜೀವ ತೆಗೆದ ಹುಬ್ಬಳ್ಳಿಯ ಪ್ರತಿಷ್ಠಿತ ಉದ್ಯಮಿ ಮಗನ ಪ್ರಕರಣ ಮುಚ್ಚಿಹಾಕಲು‌ ಹುಬ್ಬಳ್ಳಿ ಪೊಲೀಸರ ಸಾಥ್ ನೀಡಿದ್ದಾರೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ. ಈ ಬಗ್ಗೆ ಪೊಲೀಸ್​ ಇಲಾಖೆಯೇ ಉತ್ತರ ನೀಡಬೇಕಿದೆ.

ಇದನ್ನೂ ಓದಿ:ಬಳ್ಳಾರಿಯ ನಡುರಸ್ತೆಯಲ್ಲಿ ರಿಯಲ್​ ಎಸ್ಟೇಟ್​​ ಉದ್ಯಮಿಯ ಬರ್ಬರ ಕೊಲೆ.. ಭಯಾನಕ ದೃಶ್ಯ ಸೆರೆ

ABOUT THE AUTHOR

...view details