ಹುಬ್ಬಳ್ಳಿ: ಸರ್ಕಾರದ ಹೊಸ ನೀತಿಗಳನ್ನು ವಿರೋಧಿಸಿ ಸಿ.ಎಫ್.ಸಿ ಜನಾಂದೋಲನಗಳ ಮಹಾಮೈತ್ರಿ, ಜನ ಸಂಗ್ರಾಮ ಪರಿಷತ್ ಹಾಗೂ ಜನತಂತ್ರ ಪ್ರಯೋಗಶಾಲಾ ವತಿಯಿಂದ ಅಕ್ಟೋಬರ್ 2 ರಿಂದ 11 ರವರೆಗೆ ರಾಷ್ಟ್ರಾದ್ಯಂತ ಪ್ರತಿಭಟನೆ ಹಾಗೂ ತಿಳುವಳಿಕೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಮಾಜ ಪರಿವರ್ತನಾ ಸಮುದಾಯದ ಸಂಸ್ಥಾಪಕ ಅಧ್ಯಕ್ಷ ಎಸ್.ಆರ್.ಹಿರೇಮಠ ಹೇಳಿದರು.
ಸರ್ಕಾರದ ಹೊಸ ನೀತಿಗಳನ್ನು ವಿರೋಧಿಸಿ ರಾಜ್ಯಾದ್ಯಂತ ಪ್ರತಿಭಟನೆ: ಎಸ್.ಆರ್.ಹಿರೇಮಠ - ಎಸ್.ಆರ್.ಹಿರೇಮಠ
ಸರ್ಕಾರದ ಹೊಸ ನೀತಿಗಳನ್ನು ಖಂಡಿಸಿ ಸಿ.ಎಫ್.ಸಿ ಜನಾಂದೋಲನಗಳ ಮಹಾಮೈತ್ರಿ, ಜನ ಸಂಗ್ರಾಮ ಪರಿಷತ್ ಹಾಗೂ ಜನತಂತ್ರ ಪ್ರಯೋಗಶಾಲಾ ವತಿಯಿಂದ ಅಕ್ಟೋಬರ್ 2 ರಿಂದ 11 ರವರೆಗೆ ರಾಷ್ಟ್ರಾದ್ಯಂತ ಪ್ರತಿಭಟನೆ ಹಾಗೂ ತಿಳುವಳಿಕೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಸಮಾಜ ಪರಿವರ್ತನಾ ಸಮುದಾಯದ ಸಂಸ್ಥಾಪಕ ಅಧ್ಯಕ್ಷ ಎಸ್.ಆರ್.ಹಿರೇಮಠ ಹೇಳಿದರು.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಸಾಹಿತಿಗಳು ಹಾಗೂ ಹೋರಾಟಗಾರರ ಮೇಲೆ ಅನ್ಯಾಯವಾಗುತ್ತಿದ್ದು, ಅವರ ವಾಕ್ ಸ್ವಾತಂತ್ರ್ಯದ ಮೇಲೆ ಸರ್ಕಾರ ಹೊಸ ಕಾನೂನುಗಳ ಮೂಲಕ ಬಂಧಿಸುತ್ತಿದೆ. ಅಲ್ಲದೇ ನಿರುದ್ಯೋಗ, ವಲಸೆ ಕಾರ್ಮಿಕರ ಸಂಕಷ್ಟಗಳ ಕುರಿತು ಸೂಕ್ತ ಕಾರ್ಯಾಚರಣೆ ಮಾಡದ ಸರ್ಕಾರದ ವಿರುದ್ಧ ಸಿ.ಎಫ್.ಡಿ, ಜನಾಂದೋಲನಗಳ ಮಹಾಮೈತ್ರಿ ಅಕ್ಟೋಬರ್ 2 ರಿಂದ 11 ರವರೆಗೆ ರಾಷ್ಟ್ರಾದ್ಯಂತ ಪ್ರತಿಭಟನೆ ಹಾಗೂ ತಿಳುವಳಿಕೆ ಕಾರ್ಯಕ್ರಮ ನಡೆಸುತ್ತಿದೆ ಎಂದರು.
ಇನ್ನೂ ಸರ್ಕಾರ ದೇಶದಲ್ಲಿ ಬಡವರಿಗೆ, ರೈತರಿಗೆ, ಕೂಲಿ ಕಾರ್ಮಿಕರಿಗೆ ಆಗುತ್ತಿರುವ ಅನ್ಯಾಯದ ಕುರಿತು ಗಮನ ಹರಿಸದೇ ಕಾರ್ಪೋರೇಟ್ ಸಂಸ್ಥೆಗಳಿಗೆ ಅನುಕೂಲ ಮಾಡಿಕೊಡುತ್ತಿರುವುದು ದುರಾದೃಷ್ಟಕರ. ಈ ಜನ ವಿರೋಧಿ ನೀತಿಯ ವಿರುದ್ಧ ಜನರು ಎಚ್ಚೆತ್ತು ಹೋರಾಟಕ್ಕೆ ಬೆಂಬಲ ನೀಡಬೇಕೆಂದು ಮನವಿ ಮಾಡಿದರು.