ಕರ್ನಾಟಕ

karnataka

ETV Bharat / state

ಡಿಕೆಶಿ ಹಾಗೂ ಜನಾರ್ಧನ ರೆಡ್ಡಿ ವಿರುದ್ದ ಹಿರೇಮಠ ಗುಡುಗು - ಎಸ್. ಆರ್. ಹಿರೇಮಠ ಲೆಟೆಸ್ಟ್ ನ್ಯೂಸ್​

ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್. ಆರ್. ಹಿರೇಮಠ ಮಾಜಿ ಸಚಿವ ಡಿ.ಕೆ. ಶಿವಕುಮಾರ ಹಾಗೂ ಜನಾರ್ದನ ರೆಡ್ಡಿ ವಿರುದ್ಧ ಗುಡುಗಿದ್ದಾರೆ.

Hiremath , ಹಿರೇಮಠ

By

Published : Nov 22, 2019, 8:35 PM IST

ಧಾರವಾಡ:ಮಾಜಿ ಸಚಿವ ಡಿ.ಕೆ. ಶಿವಕುಮಾರ ಹಾಗೂ ಜನಾರ್ದನ ರಡ್ಡಿ ವಿರುದ್ಧ ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್. ಆರ್. ಹಿರೇಮಠ ಗುಡುಗಿದ್ದಾರೆ.

ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್. ಆರ್. ಹಿರೇಮಠ

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಡಿಕೆಶಿ ಇಡಿ ಪ್ರಕರಣವನ್ನು ಸಿಬಿಐಗೆ ನೀಡುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆಯಲಾಗಿದೆ. ಡಿಕೆ ಶಿವಕುಮಾರ್ ವಿರುದ್ಧ ಭ್ರಷ್ಟಚಾರದ ಸಮಗ್ರ ಕಾಯ್ದೆ ಅನ್ವಯ ಸಾರ್ವಜನಿಕ ಜೀವನದಲ್ಲಿರುವ ಎಮ್​ಎಲ್​ಎಗಳು, ಎಮ್​ಪಿಗಳ ಮೇಲೆ ಜಾರಿ ಮಾಡುವಂತಹ ಅಧಿಕಾರ ಇರುವುದು ಸಿಬಿಐಗೆ ಮಾತ್ರ. ಹಾಗಾಗಿ ಇದನ್ನು ಜಾರಿ ತನಿಖೆ ಮಾಡಲು ರಾಜ್ಯ ಸರ್ಕಾರ ಕ್ಯಾಬಿನೆಟ್ ಟರಾವ್ ಪಾಸ್ ಮಾಡುವಂತೆ ಒತ್ತಾಯಿಸಿದರು.

ಭ್ರಷ್ಟಾಚಾರ ವಿರುದ್ಧ ಜನವರಿಯಲ್ಲಿ ಕಾಗಿನೆಲೆಯಿಂದ ಕೂಡಲಸಂಗಮವರೆಗೆ ಶರಣ ಸಂತರ ಬೃಹತ್ ಜಾಗೃತಿ ಜಾಥಾ ನಡೆಸುತ್ತಿರುವ ಕುರಿತು ಮಾಹಿತಿ ನೀಡಿದರು.

ABOUT THE AUTHOR

...view details