ಧಾರವಾಡ:ಬೈಪಾಸ್ ರಸ್ತೆ ಅಗಲೀಕರಣಕ್ಕೆ ಆಗ್ರಹಿಸಿ ಕಾಂಗ್ರೆಸ್ ಮುಖಂಡ ಪಿ.ಎಚ್.ನೀರಲಕೇರಿ ನೇತೃತ್ವದಲ್ಲಿ ಪಾದಯಾತ್ರೆ ನಡೆಸಲಾಯಿತು.
ಧಾರವಾಡ ತಾಲೂಕಿನ ನರೇಂದ್ರ ಬೈಪಾಸ್ನಿಂದ ಇಟ್ಟಿಗಟ್ಟಿ ಗ್ರಾಮದವರೆಗೆ ಸುಮಾರು 30 ಕಿಲೋ ಮೀಟರ್ ವರೆಗೆ ಪಾದಯಾತ್ರೆ ನಡೆಸಲಾಯಿತು. ಪಾದಯಾತ್ರೆಯುದ್ದಕ್ಕೂ ಬೈಪಾಸ್ ರಸ್ತೆ ಅಗಲೀಕರಣ ಮಾಡಬೇಕು. ಜನರಿಗೆ ತೊಂದರೆಯಾಗದ ರೀತಿಯಲ್ಲಿ ರಸ್ತೆ ನಿರ್ಮಿಸಬೇಕು ಎಂದು ಅಶೋಕ್ ಖೇಣಿ ವಿರುದ್ದ ದಿಕ್ಕಾರ ಕೂಗಿದರು.