ಧಾರವಾಡ:ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರನ್ನು ದೆಹಲಿಗೆ ಕರೆಸಿದ್ದಾರೆ ಅನ್ನೋದು ಗೊತ್ತು. ಆದರೆ ಯಾವುದಕ್ಕೆ ಕರೆದಿದ್ದಾರೆ ಎಂಬುದು ನನಗೆ ಗೊತ್ತಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹೇಳಿದ್ದಾರೆ.
ಯತ್ನಾಳ್ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲ್ಲ; ಸಚಿವ ಜಗದೀಶ ಶೆಟ್ಟರ್ - Yatnal latest news
ಯತ್ನಾಳ್ ಬಗ್ಗೆ ಮಾಧ್ಯಮದವರು ಏನೇ ಕೇಳಿದ್ರೂ ಸಚಿವ ಜಗದೀಶ ಶೆಟ್ಟರ್ ನನಗೆ ಗೊತ್ತಿಲ್ಲ ಗೊತ್ತಿಲ್ಲ ಗೊತ್ತಿಲ್ಲ ಎನ್ನುತ್ತಿದ್ದು, ಯತ್ನಾಳ್ ವಿರುದ್ದ ಮಾತನಾಡಲಿಕ್ಕೆ ಶೆಟ್ಟರ್ ಹೆದರಿದ್ರಾ ಎಂಬ ಪ್ರಶ್ನೆ ಉದ್ಭವಿಸಿದೆ.
ಜಗದೀಶ್ ಶೆಟ್ಟರ್
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯತ್ನಾಳ್ ಅವರು ಎಷ್ಟು ನೋಟಿಸ್ ಬಂದ್ರು ಕ್ಯಾರೆ ಎನ್ನುತ್ತಿಲ್ಲ, ಅವರ ಅಭಿಪ್ರಾಯ ಅದು. ನನಗೆ ಏನೂ ಗೊತ್ತಿಲ್ಲ, ಯತ್ನಾಳ್ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲ್ಲ ಎಂದರು.
ಯತ್ನಾಳ್ ಬಗ್ಗೆ ಮಾಧ್ಯಮದವರು ಏನೇ ಕೇಳಿದರೂ ಶೆಟ್ಟರ್ ನನಗೆ ಗೊತ್ತಿಲ್ಲ, ಗೊತ್ತಿಲ್ಲ ಗೊತ್ತಿಲ್ಲ ಎಂದೇ ಹೇಳಿದರು. ಯತ್ನಾಳ್ ವಿರುದ್ದ ಮಾತನಾಡಲಿಕ್ಕೆ ಶೆಟ್ಟರ್ ಹೆದರಿದ್ರಾ ಎಂಬ ಪ್ರಶ್ನೆ ಉದ್ಭವಿಸಿದೆ.