ಹುಬ್ಬಳ್ಳಿ:ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ, ಧಾರವಾಡ ಭಾರತೀಯ ಮಾಹಿತಿ ತಂತ್ರಜ್ಞಾನ ವಿನಿಮಯದ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ತಂತ್ರಜ್ಞಾನದ ಸಮರ್ಪಕ ಬಳಕೆಗೆ ಹೆಸ್ಕಾಂ ಮುಂದಾಗಿದೆ.
ಈಗಾಗಲೇ ಕೆಲವೊಂದು ಅವೈಜ್ಞಾನಿಕ ನಿಲುವುಗಳಿಗೆ ಬ್ರೇಕ್ ಹಾಕಲು ಮುಂದಾಗಿರುವ ಹೆಸ್ಕಾಂ ಐಐಐಟಿ ಜೊತೆಗೆ ತಂತ್ರಜ್ಞಾನ ವಿನಿಮಯ ಮಾಡಲು ಹಾಗೂ ಸಾರ್ವಜನಿಕರಿಗೆ ಮತ್ತಷ್ಟು ಗುಣಮಟ್ಟದ ಸೇವೆ ನೀಡಲು ಚಿಂತನೆ ನಡೆಸಿದೆ. ಈ ನಿಟ್ಟಿನಲ್ಲಿ ಐಐಐಟಿ ನಿರ್ದೇಶಕ ಡಾ.ಕವಿ ಮಹೇಶ ಹಾಗೂ ಹೆಸ್ಕಾಂ ನಿರ್ದೇಶಕಿ ಡಿ.ಭಾರತಿ ಅವರು ಒಪ್ಪಂದಕ್ಕೆ ಸಹಿ ಹಾಕಿದರು.