ಕರ್ನಾಟಕ

karnataka

ETV Bharat / state

ಹೆಸ್ಕಾಂ ಅವ್ಯವಹಾರ ಪ್ರಕರಣ: ಟೆಂಡರ್ ರದ್ದುಗೊಳಿಸಿದ ಇಂಧನ ಇಲಾಖೆ - ETv Bharat kannada news

ಹೆಸ್ಕಾಂ ಟೆಂಡರ್ ಅವ್ಯವಹಾರ ಕುರಿತಂತೆ ಟೆಂಡರ್ ರದ್ದುಗೊಳಿಸಿ ಇಂಧನ ಇಲಾಖೆ ಆದೇಶ ಹೊರಡಿಸಿದೆ.

Former General Secretary of State Electricity Contractors Association G. Rudresh
ರಾಜ್ಯ ವಿದ್ಯುತ್​ ಗುತ್ತಿಗೆದಾರರ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ ಜಿ.ರುದ್ರೇಶ್

By

Published : Nov 25, 2022, 12:43 PM IST

Updated : Nov 25, 2022, 5:14 PM IST

ಹುಬ್ಬಳ್ಳಿ:ಹೆಸ್ಕಾಂನಲ್ಲಿ ನೂರಾರು ಕೋಟಿ ರೂಪಾಯಿ ಗುತ್ತಿಗೆ ಕಾಮಗಾರಿಯಲ್ಲಿ 25% ಕಮೀಷನ್ ದಂಧೆ ನಡೆದಿದೆ. ವಿವಿಧ ಕಾಮಗಾರಿಗಳಿಗೆ 472 ಕೋಟಿ ರೂಪಾಯಿ ಟೆಂಡರ್​ನಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿದೆ ಎಂದು ರಾಜ್ಯ ವಿದ್ಯುತ್​ ಗುತ್ತಿಗೆದಾರರ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ ಜಿ.ರುದ್ರೇಶ್​ ಆರೋಪಿಸಿದ್ದರು. ಇದೀಗ ಟೆಂಡರ್ ರದ್ದುಗೊಳಿಸಿ ಇಂಧನ ಇಲಾಖೆ ಆದೇಶ ಹೊರಡಿಸಿದೆ.

ರೈತರ ನೀರಾವರಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿ ಹೆಚ್‌ಟಿ ಲೈನ್ ಮತ್ತು ಎಲ್‌ಟಿ ಲೈನ್ ನಿರ್ಮಿಸುವುದು ಹಾಗೂ ಲಿಂಕ್‌ಲೈನ್ ಕಾಮಗಾರಿಗೆ 34 ಲಾಟ್‌ಗಳಲ್ಲಿ ಟೆಂಡರ್ ನೀಡಲಾಗಿತ್ತು. ಆದರೆ ಲಂಚ ನೀಡುವವರಿಗೆ ಅನುಕೂಲ ಮಾಡಲು ತರಾತುರಿಯಲ್ಲಿ ಅವೈಜ್ಞಾನಿಕವಾಗಿ ಟೆಂಡರ್ ರೂಪಿಸಿ ಭ್ರಷ್ಟಾಚಾರ ಮಾಡಲಾಗಿದೆ ಎಂದು ಹೆಸ್ಕಾಂ ಎಂಡಿ ಡಿ.ಭಾರತಿ ಮತ್ತು ತಾಂತ್ರಿಕ ನಿರ್ದೇಶಕ ಶ್ರೀಕಾಂತ ಸಸಾಲೊಟ್ಟಿ ವಿರುದ್ದ ಲೋಕಾಯುಕ್ತಕ್ಕೆ ದೂರು ನೀಡಿದ್ದರು.

ಇದರಿಂದ ಎಚ್ಚೆತ್ತುಕೊಂಡ ಇಂಧನ ಇಲಾಖೆಯ ಆಪ್ತ ಕಾರ್ಯದರ್ಶಿ ಡಾ.ವಿಜಯ್‌ಕುಮಾರ್ ಎನ್.ತೋರಗಲ್ ಟೆಂಡರ್ ರದ್ದುಗೊಳಿಸಿ ಆದೇಶಿಸಿದ್ದಾರೆ.

ಇದನ್ನೂ ಓದಿ:ಹೆಸ್ಕಾಂ ಟೆಂಡರ್​ನಲ್ಲಿ ಅವ್ಯವಹಾರ ಆರೋಪ: ಲೋಕಾಯುಕ್ತಕ್ಕೆ ದೂರು‌ ನೀಡಿದ ಗುತ್ತಿಗೆದಾರರು

Last Updated : Nov 25, 2022, 5:14 PM IST

ABOUT THE AUTHOR

...view details