ಕರ್ನಾಟಕ

karnataka

ETV Bharat / state

ಬಿತ್ತಿ ಪತ್ರ ಹಂಚಿ ಹೆಲ್ಮೆಟ್​ ಜಾಗೃತಿ... ದೇಶಪಾಂಡೆ ಫೌಂಡೇಶನ್​ನಿಂದ​ ಅಭಿಯಾನ - ಪೂರ್ವ ಸಂಚಾರಿ ಪೊಲೀಸರು

ನಗರದ ದೇಶಪಾಂಡೆ ಫೌಂಡೇಶನ್ ಹೆಲ್ಮೆಟ್​ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಯುವಕ-ಯುವತಿಯರು ಹೆಲ್ಮೆಟ್ ಇಲ್ಲದೆ ಸಂಚಾರ ನಡೆಸುವುದರಿಂದ ಆಗುವ ದುಷ್ಪರಿಣಾಮಗಳನ್ನು ವಾಹನ ಸವಾರರಿಗೆ ವಿವರಿಸಿದರು.

ದೇಶಪಾಂಡೆ ಫೌಂಡೇಶನ್​ ವತಿಯಿಂದ ಅಭಿಯಾನ

By

Published : Aug 19, 2019, 4:19 PM IST

ಹುಬ್ಬಳ್ಳಿ: ಪೊಲೀಸರು ಹಲ್ಮೆಟ್ ಧರಿಸುವಂತೆ ಎಷ್ಟೇ ಅಭಿಯಾನ ಮಾಡಿದರು‌ ಕೂಡ ವಾಹನ ಸವಾರರು ಜಾಗೃತಿರಾಗುತ್ತಿಲ್ಲ. ಹೀಗಾಗಿ ನಗರದ ದೇಶಪಾಂಡೆ ಫೌಂಡೇಶನ್ ಹೆಲ್ಮೆಟ್​ ಕುರಿತು ಜಾಗೃತಿ ಮೂಡಿಸುತ್ತಿದೆ.

ಚೆನ್ನಮ್ಮ ಸರ್ಕಲ್​ನಲ್ಲಿ ದೇಶಪಾಂಡೆ ಫೌಂಡೇಶನ್ ವತಿಯಿಂದ ಯುವಕ-ಯುವತಿಯರು ಹೆಲ್ಮೆಟ್ ಇಲ್ಲದೆ ಸಂಚರಿಸುವ ಬೈಕ್ ಸವಾರರಿಗೆ ಹೆಲ್ಮೆಟ್ ಮಹತ್ವವನ್ನು ತಿಳಿಸಿಕೊಟ್ಟರು. ಹೆಲ್ಮೆಟ್ ಇಲ್ಲದೆ ಸಂಚಾರ ನಡೆಸುವುದರಿಂದ ಆಗುವ ದುಷ್ಪರಿಣಾಮಗಳನ್ನು ವಿವರಿಸಿದರು.

ದೇಶಪಾಂಡೆ ಫೌಂಡೇಶನ್​ ವತಿಯಿಂದ ಹೆಲ್ಮೆಟ್​ ಅಭಿಯಾನ

ನೀವು ನಿಮ್ಮ ಕುಟುಂಬಕ್ಕೆ ಅತಿ ಮುಖ್ಯವಾದವರು. ನಿಮ್ಮನ್ನು ನೆಚ್ಚಿಕೊಂಡು ಮನೆಯಲ್ಲೇ ಅದೆಷ್ಟೋ ಜನರು ಕಾಯುತ್ತಿರುತ್ತಾರೆ. ಹೀಗಾಗಿ ನೀವು ಸುರಿಕ್ಷಿತವಾಗಿ ಹೋಗಿ, ಬರಲು ಹೆಲ್ಮೆಟ್ ಕೂಡಾ ಅತೀ ಮಹತ್ವದ್ದಾಗಿದೆ ಎಂದು ಅರಿವು ಮೂಡಿಸಿದರು.

ಜೊತೆಗೆ ಕೆಲವೊಂದಿಷ್ಟು ಯುವಕರು ತಮ್ಮ ತಲೆಯ ಹೇರ್ ಸ್ಟೈಲ್ ಕೆಡುತ್ತೆ ಎಂದು ಹೆಲ್ಮೆಟ್ ಉಪಯೋಗಿಸುವುದಿಲ್ಲ. ಹೀಗಾಗಿ ಅಫಘಾತ ಸಮಯದಲ್ಲಿ ತಮ್ಮ ಅಮೂಲ್ಯವಾದ ಜೀವನವನ್ನು ಕಳೆದುಕೊಳ್ಳುತ್ತಾರೆ. ಎಲ್ಲರೂ ಹೆಲ್ಮೆಟ್ ಉಪಯೋಗ ಮಾಡುವಂತೆ ಜನರಲ್ಲಿ ಬಿತ್ತಿ ಪತ್ರ ಹಂಚುವ ಮೂಲಕ ಅರಿವು ಮೂಡಿಸಿದರು. ಪೂರ್ವ ಸಂಚಾರಿ ಪೊಲೀಸರು ಕೂಡ ಈ ಅಭಿಯಾನಕ್ಕೆ ಸಾಥ್ ನೀಡಿ ಸಾರ್ವಜನಿಕರು ಹಾಗೂ ವಾಹನ ಸವಾರರಿಗೆ ಜಾಗೃತಿ ಮೂಡಿಸಿದರು.

ABOUT THE AUTHOR

...view details