ಕರ್ನಾಟಕ

karnataka

ETV Bharat / state

ಅವಳಿ ನಗರದಲ್ಲಿ ವರುಣನ ಆರ್ಭಟ: ರೈತ ಕಂಗಾಲು - ಹುಬ್ಬಳ್ಳಿ ವರುಣನ ಆರ್ಭಟ

ಕಳೆದ ತಿಂಗಳಲ್ಲಿ ಸುರಿದ ಮಳೆಗೆ ನಗರದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದರಿಂದ ಬೆಳೆಗಳು ನೀರಿನಲ್ಲಿ ಕೊಚ್ಚಿ ಹೋಗಿದ್ದು, ಅದೆಷ್ಟೋ ಕುಟುಂಬಗಳು ಬೀದಿಗೆ ಬಂದವು. ನಂತರ ಮಳೆ ಸ್ವಲ್ಪ ಮಟ್ಟಿಗೆ ಬಿಡುವು ಕೊಟ್ಟಿತ್ತಾದರೂ ಮತ್ತೆ ಇದೀಗ ಮಳೆ ಸುರಿಯುತ್ತಿದ್ದು, ಇದರಿಂದ ಮತ್ತೆ ಜನತೆ ಆತಂಕಕ್ಕೀಡಾಗಿದ್ದಾರೆ.

ಅವಳಿ ನಗರದಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆಗೆ ರೈತ ಕಂಗಾಲು

By

Published : Oct 3, 2019, 5:11 PM IST

ಹುಬ್ಬಳ್ಳಿ:ಅವಳಿ ನಗರದಲ್ಲಿ ಮತ್ತೆ ಮಳೆರಾಯನ ಆರ್ಭಟ ಶುರುವಾಗಿದ್ದು, ಜನರನ್ನ ಆತಂಕಕ್ಕೀಡುಮಾಡಿದೆ.

ಅವಳಿ ನಗರದಲ್ಲಿ ಬಿಡದೆ ಸುರಿಯುತ್ತಿರುವ ಮಳೆಗೆ ರೈತ ಕಂಗಾಲು

ಹೌದು, ಕಳೆದ ತಿಂಗಳಲ್ಲಿ ಸುರಿದ ಮಳೆಗೆ ನಗರದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದರಿಂದ ಬೆಳೆಗಳು ನೀರಿನಲ್ಲಿ ಕೊಚ್ಚಿ ಹೋಗಿದ್ದು, ಅದೆಷ್ಟೋ ಕುಟುಂಬಗಳು ಬೀದಿಗೆ ಬಂದವು. ಅನಂತರ ಮಳೆ ಸ್ವಲ್ಪ ಮಟ್ಟಿಗೆ ಬಿಡುವು ಕೊಟ್ಟಿತ್ತಾದರೂ ಮತ್ತೆ ಇದೀಗ ಮಳೆ ಸುರಿಯುತ್ತಿದ್ದು, ಇದರಿಂದ ಮತ್ತೆ ಜನತೆ ಆತಂಕಕ್ಕೀಡಾಗಿದ್ದಾರೆ.

ಇನ್ನು ರೈತನ ಮುಂಗಾರು ಬೆಳೆಗಳು ಸಂಪೂರ್ಣ ಹಾಳಾಗಿದ್ದು, ಹಿಂಗಾರು ಬೆಳೆಗಳಾದರೂ ಬರುವ ನೀರಿಕ್ಷೆಯಲ್ಲಿ ಹೊಲಗಳನ್ನು ಮತ್ತೆ ಹದಗೊಳಿಸಲು ಮುಂದಾಗಿದ್ದರು. ಆದರೆ, ಮತ್ತೆ ಕಳೆದ ಎರಡು ಮೂರು ದಿನಗಳಿಂದ ಅಗೊಮ್ಮೆ ಇಗೊಮ್ಮೆ ಸುರಿಯುತ್ತಿರುವ ಮಳೆಯಿಂದ ರೈತರು ಕಂಗಾಲಾಗಿದ್ದು, ಬಿಸಿಲು ಬಿದ್ರೆ ಮಾತ್ರ ಬೆಳೆಗಳು ಉಳಿಯಲು ಸಾಧ್ಯ. ಇಲ್ಲವಾದ್ರೆ ಯಾವುದೇ ಬೆಳೆಗಳು ನಮ್ಮ ಕೈಗೆ ಸಿಗುವುದಿಲ್ಲ ಎಂದು ಗೊಣಗಾಡುತ್ತಿದ್ದಾರೆ.

ABOUT THE AUTHOR

...view details