ಹುಬ್ಬಳ್ಳಿ: ಸತತವಾಗಿ ಸುರಿದ ಮಳೆಗೆ ಕುಂದಗೋಳ ತಾಲೂಕಿನ ಗುಡ್ಯಾನಕಟ್ಟಿ ಗ್ರಾಮಗಳಲ್ಲಿ ಬಹುತೇಕ ಮನೆಗಳಲ್ಲಿ ನೀರು ನುಗ್ಗಿದ ಪರಿಣಾಮ ನೀರು ಹೊರ ಹಾಕಲು ಜನರು ಹರಸಾಹಸ ಪಡುತ್ತಿದ್ದಾರೆ.
ಹುಬ್ಬಳ್ಳಿಯಲ್ಲೂ ಧಾರಾಕಾರ ಮಳಿ ಬಂದೈತಿ: ಮನೆಯೊಳಗ ಮಳೆ ನೀರು - ಹುಬ್ಬಳ್ಳಿಯ ಕುಂದಗೋಳ ತಾಲೂಕಿನ ಗುಡ್ಯಾನಕಟ್ಟಿ ಗ್ರಾಮ
ಸತತವಾಗಿ ಸುರಿದ ಮಳೆಗೆ ಹುಬ್ಬಳ್ಳಿಯ ಕುಂದಗೋಳ ತಾಲೂಕಿನ ಗುಡ್ಯಾನಕಟ್ಟಿ ಗ್ರಾಮಗಳಲ್ಲಿ ಬಹುತೇಕ ಮನೆಗಳಲ್ಲಿ ನೀರು ನುಗ್ಗಿದೆ.
ಹುಬ್ಬಳ್ಳಿಯಲ್ಲಿ ಭಾರಿ ಮಳೆ: ಮನೆಗಳಿಗೆ ನುಗ್ಗಿದ ನೀರು
ಕುಂದಗೋಳ ತಾಲೂಕಿನ ಗ್ರಾಮದಲ್ಲಿ 20ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು, ಮನೆಯ ವಸ್ತುಗಳು ನೀರಿನಲ್ಲಿ ಮುಳುಗಡೆಯಾಗಿವೆ. ಮನೆಗಳಿಗೆ ನೀರು ನುಗ್ಗಿರುವ ನೀರನ್ನು ಯಂತ್ರಗಳ ಮುಖಾಂತರ ಹೊರಹಾಕ್ತಿದ್ದಾರೆ. ಹಳ್ಳಕೊಳ್ಳಗಳು ಮೈತುಂಬಿಕೊಂಡಿದ್ದು, ಕುಂದಗೋಳ ತಾಲೂಕಿನ ರೊಟ್ಟಿಗವಾಡ ಗ್ರಾಮದ ಕೆರೆ 10 ವರ್ಷಗಳ ನಂತರ ಇದೀಗ ಭರ್ತಿಯಾಗಿದೆ.
ಅಲ್ಲದೇ ಬಾರಿ ಮಳೆಯಿಂದಾಗಿ ಗ್ರಾಮೀಣ ಪ್ರದೇಶಗಳಿಗೆ ತೆರಳಬೇಕಾಗಿದ್ದ ವಾಹನಗಳು ರಸ್ತೆ ಮಧ್ಯೆಯೇ ನಿಂತಿವೆ. ಅಲ್ಲದೇ ವಿದ್ಯುತ್ ಸಂಪರ್ಕವು ಕಡಿತಗೊಂಡ ಹಿನ್ನೆಲೆಯಲ್ಲಿ ಜನರು ಕತ್ತಲಲ್ಲಿ ಕಾಲ ಕಳೆಯುವಂತಾಗಿದೆ.