ಹುಬ್ಬಳ್ಳಿ: ತಾಲೂಕಿನಲ್ಲಿ ಕಳೆದ ವಾರ ಸುರಿದಿದ್ದ ಮಳೆ ಸಾಕಷ್ಟು ಹಾನಿ ಮಾಡಿತ್ತು. ಇದರಿಂದ ಈ ಭಾಗದ ರೈತರು ಮತ್ತು ಜನರು ಹೊರಬರುವ ಮುನ್ನವೇ ಮತ್ತೆ ಮಳೆ ಆರಂಭವಾಗಿರುವುದು ಆತಂಕ ಮೂಡಿಸಿದೆ.
ಹುಬ್ಬಳ್ಳಿಯಲ್ಲಿ ಮತ್ತೆ ವರುಣಾರ್ಭಟ: ರೈತರು ಕಂಗಾಲು - hubballi rain news
ಹುಬ್ಬಳ್ಳಿ ತಾಲೂಕಿನಲ್ಲಿ ಕಳೆದ ವಾರ ಸುರಿದ ಭಾರಿ ಮಳೆಯಿಂದಾಗಿ ರೈತರ ಜಮೀನಿನಲ್ಲಿದ್ದ ಬೆಳೆಗಳು ನಾಶವಾಗಿವೆ. ಇದೀಗ ಮಳೆ ಮತ್ತೆ ಆರ್ಭಟಿಸುತ್ತಿರುವುದು ರೈತರಲ್ಲಿ ಆತಂಕ ಮೂಡಿಸಿದೆ.
ಹುಬ್ಬಳ್ಳಿಯಲ್ಲಿ ಮತ್ತೆ ಸುರಿದ ಮಳೆ
ಹೊಲಗಳಲ್ಲಿ ಬಿತ್ತಿದ ಬೀಜಗಳು ಮೊಳಕೆ ಒಡೆದು ಇನ್ನೇನು ಫಲಕೊಡಬೇಕು ಎನ್ನುವಷ್ಟರಲ್ಲಿಯೇ ಬಿಟ್ಟು ಬಿಡದೇ ಸುರಿದ ಮಳೆ ರೈತರನ್ನು ನಷ್ಟಕ್ಕೆ ಸಿಲುಕಿಸಿದೆ.
ಶೇಂಗಾ, ಹೆಸರು, ಹತ್ತಿ ಇನ್ನಿತರ ಬೆಳೆಗಳಿಗೆ ಈಗ ಬಿಸಿಲಿನ ಅವಶ್ಯಕತೆ ಇದೆ. ಇನ್ಮುಂದೆ ಮಳೆ ಬಿಡುವು ನೀಡಿದ್ರೆ ಮಾತ್ರ ಮುಂಗಾರು ಬೆಳೆಗಳು ಫಸಲು ನೀಡುತ್ತವೆ.ಈಗ ಮತ್ತೆ ಮಳೆ ಆರಂಭವಾಗಿದ್ದು, ರೈತ ಸಮೂಹ ಆತಂಕಕ್ಕೊಳಗಾಗಿದೆ.