ಕರ್ನಾಟಕ

karnataka

ETV Bharat / state

ಧಾರವಾಡದಲ್ಲಿ ವರುಣನ ಆರ್ಭಟ.. ಬಿಸಿಲ ಬೇಗೆ ತಣಿಸಿದ ವರುಣದೇವ - dharwad latest news

ಬಿಸಿಲ ಬೇಗೆಯಿಂದ ಕಂಗೆಟ್ಟಿದ್ದ ಜನರಿಗೆ ವರುಣ ದೇವ ತಂಪೆರೆದಿದ್ದಾನೆ. ಆಗಾಗ ಭಾರೀ ಗುಡುಗಿನೊಂದಿಗೆ ಬರುತ್ತಿರುವ ಮಳೆ ಜಿಲ್ಲೆಯ ಜನರಿಗೆ ಖುಷಿ ನೀಡಿದೆ.

heavy rain in dharwad
ಧಾರವಾಡದಲ್ಲಿ ವರುಣನ ಆರ್ಭಟ

By

Published : Jun 1, 2020, 7:30 PM IST

ಧಾರವಾಡ :ಭಾನುವಾರದಿಂದ ಜಿಲ್ಲೆಯಲ್ಲಿ ವರುಣನ ಆರ್ಭಟ ಶುರುವಾಗಿದೆ. ಇಂದು ಬೆಳಗ್ಗೆಯಿಂದಲೇ ಮೋಡ ‌ಮುಸುಕಿದ ವಾತಾವರಣ ಹಾಗೂ ತುಂತುರು ಮಳೆಯಾಗಿದೆ.

ಬಿಸಿಲ ಬೇಗೆಯಿಂದ ಕಂಗೆಟ್ಟಿದ್ದ ಜನರಿಗೆ ವರುಣ ದೇವ ತಂಪೆರೆದಿದ್ದಾನೆ. ಆಗಾಗ ಭಾರೀ ಗುಡುಗಿನೊಂದಿಗೆ ಬರುತ್ತಿರುವ ಮಳೆ ಜಿಲ್ಲೆಯ ಜನರಿಗೆ ಖುಷಿ ನೀಡಿದೆ.

ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರೈತರ ಕೃಷಿ ಚಟುವಟಿಕೆಗಳು ಗರಿಗೆದರಿವೆ. ಬಿತ್ತನೆ ಕಾರ್ಯ ಸೇರಿ ಕೃಷಿಗೆ ಸಂಬಂಧಿಸಿದ ವಸ್ತುಗಳನ್ನು ಖರೀದಿಸಲು ರೈತರು ತಯಾರಿ ಮಾಡಿಕೊಳ್ಳುತ್ತಿದ್ದಾರೆ.

ABOUT THE AUTHOR

...view details