ಧಾರವಾಡ:ಭಾರೀ ಮಳೆಗೆ ಜಿಲ್ಲೆಯಲ್ಲಿ ಪ್ರವಾಹದ ಭೀತಿ ಹೆಚ್ಚಾಗಿದ್ದು, ರೈತನೊಬ್ಬ ಹಳ್ಳದ ಪ್ರವಾಹಕ್ಕೆ ಕೊಚ್ಚಿಹೋಗಿರುವ ಶಂಕೆ ವ್ಯಕ್ತವಾಗಿದೆ.
ಧಾರವಾಡದಲ್ಲಿ ಹಳ್ಳದ ಪ್ರವಾಹಕ್ಕೆ ರೈತ ಕೊಚ್ಚಿ ಹೋದ ಶಂಕೆ - ಪ್ರವಾಹ
ಧಾರವಾಡದಲ್ಲಿ ರೈತನೋರ್ವ ನಾಪತ್ತೆಯಾಗಿ ಮೂರು ದಿನ ಕಳೆದರೂ ಯಾವುದೇ ಅಧಿಕಾರಿ ಸ್ಪಂದಿಸಿಲ್ಲ ಎಂದು ಸಂಬಂಧಿಕರು ಆಕ್ರೋಶ ಹೊರಹಾಕಿದ್ದಾರೆ.
![ಧಾರವಾಡದಲ್ಲಿ ಹಳ್ಳದ ಪ್ರವಾಹಕ್ಕೆ ರೈತ ಕೊಚ್ಚಿ ಹೋದ ಶಂಕೆ](https://etvbharatimages.akamaized.net/etvbharat/prod-images/768-512-4099253-thumbnail-3x2-dwd.jpg)
ಹಳ್ಳದ ಪ್ರವಾಹಕ್ಕೆ ರೈತ ಕೊಚ್ಚಿ ಹೋದ ಶಂಕೆ: ಮುಗಿಲುಮುಟ್ಟಿದ ಸಂಬಂಧಿಕರ ಆಕ್ರಂದನ
ಹಳ್ಳದ ಪ್ರವಾಹಕ್ಕೆ ರೈತ ಕೊಚ್ಚಿಹೋದ ಶಂಕೆ: ಮುಗಿಲುಮುಟ್ಟಿದ ಸಂಬಂಧಿಕರ ಆಕ್ರಂದನ
ಧಾರವಾಡ ತಾಲೂಕಿನ ಕಲ್ಲಾಪುರದ ಬಸಪ್ಪ ಪಾಟೀಲ್ (54) ನಾಪತ್ತೆಯಾಗಿರುವ ರೈತ. ಹೊಲದಿಂದ ವಾಪಸ್ ಬರುವ ಸಂದರ್ಭದಲ್ಲಿ ಪ್ರವಾಹಕ್ಕೀಡಾಗಿರುವ ಕಲ್ಲಾಪುರ-ವೀರಾಪುರ ಮಧ್ಯದ ಹಳ್ಳದಲ್ಲಿ ನಾಪತ್ತೆಯಾಗಿದ್ದಾನೆಂದು ಕುಟುಂಬಸ್ಥರು ಸಂಶಯ ವ್ಯಕ್ತಪಡಿಸಿದ್ದಾರೆ.
ಇನ್ನು, ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿರುವ ರೈತನ ಮನೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭೇಟಿ ನೀಡಿ ಸಾಂತ್ವನ ಹೇಳಿದರು.