ಹುಬ್ಬಳ್ಳಿ: ವಾಣಿಜ್ಯ ನಗರಿಯಲ್ಲಿ ಕಳೆದೊಂದು ವಾರದಿಂದ ನಿರಂತರವಾಗಿ ಮಳೆ ಸುರಿಯುತ್ತಿರುವ ಪರಿಣಾಮ ಮಲೆನಾಡಿನ ವಾತಾವರಣ ನಿರ್ಮಾಣವಾಗಿದ್ದು, ಸಾರ್ವಜನಿಕರು ಛತ್ರಿ ಹಾಗೂ ಜರ್ಕಿನ್ ಖರೀದಿಗೆ ಮುಗಿಬಿದ್ದಿದ್ದಾರೆ.
ವಾಣಿಜ್ಯ ನಗರಿಯಲ್ಲಿ 'ಮಳೆ'ನಾಡಿನ ವಾತಾವರಣ: ಛತ್ರಿ, ಜರ್ಕಿನ್ಗೆ ಮೊರೆ ಹೋದ ಜನತೆ - ಹುಬ್ಬಳ್ಳಿ ನಗರದಾದ್ಯಂತ ಮಳೆ
ಹುಬ್ಬಳ್ಳಿ ನಗರದಾದ್ಯಂತ ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆಗೆ ಜನರು ಬೇಸತ್ತಿದ್ದು, ಮನೆಯಿಂದ ಹೊರ ಬರಲು ಸಾಧ್ಯವಾಗದ ಹಿನ್ನೆಲೆ ಜರ್ಕಿನ್ ಹಾಗೂ ಛತ್ರಿ ಖರೀದಿಸುವಲ್ಲಿ ನಿರತರಾಗಿದ್ದಾರೆ.
ಹುಬ್ಬಳ್ಳಿಯಲ್ಲಿ ಮಲೆನಾಡಿನ ವಾತವರಣ ಸೃಷ್ಟಿ
ಕಳೆದ ಒಂದು ವಾರದಿಂದ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಗೆ ಹುಬ್ಬಳ್ಳಿಗರ ಜನ - ಜೀವನ ಅಸ್ತವ್ಯಸ್ತಗೊಂಡಿದ್ದು, ಅಕ್ಷರಶಃ ಮಳೆನಾಡಿನ ವಾತಾವರಣ ಸೃಷ್ಟಿಯಾಗಿದೆ. ಮನೆಯಿಂದ ಹೊರಗೆ ಬರಲು ಸಾಧ್ಯವಾಗದ ಹಿನ್ನೆಲೆ, ಇದೀಗ ಸಾಕಷ್ಟು ಮಂದಿ ಮಾರುಕಟ್ಟೆಯಲ್ಲಿ ಜರ್ಕಿನ್ ಹಾಗೂ ಛತ್ರಿ ಖರೀದಿಸುವ ಭರಾಟೆಯಲ್ಲಿದ್ದಾರೆ.