ಕರ್ನಾಟಕ

karnataka

ETV Bharat / state

ಬಂಪರ್​ ಬೆಲೆಯ ಮಧ್ಯೆ ಟ್ರ್ಯಾಕ್ಟರ್​ ಮೂಲಕ ಈರುಳ್ಳಿ ನಾಶಪಡಿಸಿದ ರೈತ: ಕಾರಣ ಏನ್​ ಗೊತ್ತಾ? - onion crop destroyed news

ಧಾರವಾಡ ಜಿಲ್ಲೆಯಲ್ಲಿ ಎಡಬಿಡದೇ ಸುರಿದ ಮಳೆಗೆ ಈರುಳ್ಳಿ ಬೆಳೆ ಸಂಪೂರ್ಣ ಕೊಳೆತು ಹಾಳಾಗಿದ್ದು, ಉಳ್ಳಾಗಡ್ಡಿ ಬೆಳೆದ ರೈತರು ಬೆಳೆಯನ್ನು ತಮ್ಮ ಕೈಯಾರೆ ನಾಶಪಡಿಸುವ ಪರಿಸ್ಥಿತಿ ಎದುರಾಗಿದೆ.

onion crop destroyed due to heavy rain
ಕೊಳೆತ ಈರುಳ್ಳಿ ಬೆಳೆ

By

Published : Oct 23, 2020, 1:35 PM IST

ಧಾರವಾಡ: ಜಿಲ್ಲೆಯಲ್ಲಿ ಸತತವಾಗಿ ಸುರಿದ ಮಳೆಯಿಂದ ಹಾಳಾದ ಈರುಳ್ಳಿ ಬೆಳೆಯನ್ನು ರೈತರು ಟ್ರ್ಯಾಕ್ಟರ್ ಮೂಲಕ ನಾಶಪಡಿಸುವ ದುಸ್ಥಿತಿ ಬಂದೊದಗಿದೆ.

ಕೊಳೆತ ಈರುಳ್ಳಿ ಬೆಳೆ

ಜಿಲ್ಲೆಯ ನವಲಗುಂದ ತಾಲೂಕಿನ ತಲೆಮೊರಬ ಗ್ರಾಮದ ದಾನಪ್ಪ ಹಡಪದ ಎಂಬುವರು ತಮ್ಮ ನಾಲ್ಕು ಎಕರೆ ಜಮೀನಿನಲ್ಲಿ ಈರುಳ್ಳಿ ಬೆಳೆದಿದ್ರು. ಧಾರಾಕಾರ ಮಳೆಯಿಂದ ತೇವಾಂಶ ಹೆಚ್ಚಾಗಿ, ಈರುಳ್ಳಿ ಬೆಳೆಗೆ ರೋಗ ತಗುಲಿದ ಹಿನ್ನೆಲೆ ಬೆಳೆಯನ್ನು ನಾಶಪಡಿದ್ದಾರೆ. ಅಂದಾಜು ಸುಮಾರು 5 ರಿಂದ 6 ಲಕ್ಷ ಮೌಲ್ಯದ ಬೆಳೆಯನ್ನು ಟ್ರ್ಯಾಕ್ಟರ್​ ಮೂಲಕ ನಾಶಪಡಿಸಿದ್ದಾರೆ.

ವಿಪರ್ಯಾಸ ಅಂದ್ರೆ ಈರುಳ್ಳಿ ಬೆಲೆ ಇದೀಗ ಗಗನಕ್ಕೇರಿದೆ. ಆದ್ರೆ ಬೆಳೆ ಮಳೆಗೆ ಸಂಪೂರ್ಣ ಹಾಳಾಗಿದೆ. ಇದರಿಂದ ಈರುಳ್ಳಿ ಬೆಳೆಗಾರರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.

ABOUT THE AUTHOR

...view details