ಧಾರವಾಡ:ನಿನ್ನೆ ತಡರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಹಾರೋಬೆಳವಡಿ-ಇನಾಮಹೊಂಗಲ ನಡುವಿನ ತುಪ್ಪರಿ ಹಳ್ಳದ ತಾತ್ಕಾಲಿಕ ಸೇತುವೆ ಮುಳುಗಡೆಯಾಗಿದೆ.
ಧಾರವಾಡದಲ್ಲಿ ಧಾರಾಕಾರ ಮಳೆಗೆ ಮುಳುಗಿತು ಸೇತುವೆ - latest news of dharwad
ಶನಿವಾರ ತಡರಾತ್ರಿ ಸುರಿದ ಧಾರಾಕಾರ ಮಳೆ ಹಿನ್ನಲೆ, ಹಾರೋಬೆಳವಡಿ-ಇನಾಮಹೊಂಗಲ ನಡುವಿನ ತುಪ್ಪರಿ ಹಳ್ಳದ ತಾತ್ಕಾಲಿಕ ಸೇತುವೆ ಮುಳುಗಡೆಯಾಗಿದೆ.

ಧಾರವಾಡದಲ್ಲಿ ಧಾರಾಕಾರ ಮಳೆ...ಸೇತುವೆ ಮುಳುಗಡೆ
ಧಾರವಾಡದಲ್ಲಿ ಧಾರಾಕಾರ ಮಳೆ...ಸೇತುವೆ ಮುಳುಗಡೆ
ಸೇತುವೆ ಮುಳುಗಡೆ ಪರಿಣಾಮ ಧಾರವಾಡ -ವಿಜಯಪುರ ರಸ್ತೆಯಲ್ಲಿ ಬಸ್ ಸಂಚಾರ ಸ್ಥಗಿತಗೊಂಡಿದ್ದು, ವಾಹನಗಳು ಸಾಲುಗಟ್ಟಿ ನಿಂತಿವೆ. ಶೀಗೆ ಹುಣ್ಣಿಮೆ ಹಿನ್ನೆಲೆ ಶ್ರೀಕ್ಷೇತ್ರ ಯಲ್ಲಮ್ಮನ ಗುಡ್ಡಕ್ಕೆ ಹೋಗುತ್ತಿರುವ ಭಕ್ತರು ಸಂಚಾರ ಬಂದ್ ಆಗಿದ್ದರಿಂದ ಪರ್ಯಾಯ ಮಾರ್ಗ ಕಂಡುಕೊಂಡಿದ್ದಾರೆ. ಇನಾಮಹೊಂಗಲದಿಂದ ಉಪ್ಪಿನ ಬೆಟಗೇರಿ ಮಾರ್ಗವಾಗಿ ಧಾರವಾಡಕ್ಕೆ ವಾಹನಗಳು ತೆರಳುತ್ತಿವೆ.
ಇತ್ತೀಚೆಗೆ ಮಳೆಯಾಗಿ ಸೇತುವೆ ಕುಸಿದು ಸಂಚಾರ ಸಂಪೂರ್ಣ ಬಂದ್ ಆದಾಗ ಪರ್ಯಾಯವಾಗಿ ಈ ಸಣ್ಣ ಸೇತುವೆ ನಿರ್ಮಿಸಲಾಗಿತ್ತು. ಭಾರಿ ಮಳೆಗೆ ತಾತ್ಕಾಲಿಕ ಸೇತುವೆಯೂ ಮುಳುಗಡೆಯಾಗಿದ್ದು, ಸಾರ್ವಜನಿಕರು, ಪ್ರಯಾಣಿಕರು ಪರದಾಡುವಂತಾಗಿದೆ.