ಕರ್ನಾಟಕ

karnataka

ETV Bharat / state

ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದ ಭಾರೀ ಹಾನಿ: ಡಿಸಿ ನಿತೇಶ್​ ಪಾಟೀಲ್ - Heavy heavy

ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಎರಡು ಜೀವಗಳಿಗೆ ಹಾನಿಯಾಗಿದ್ದು, ಎರಡೂ ಕುಟುಂಬಕ್ಕೆ 5 ಲಕ್ಷ ರೂ. ಚೆಕ್​ಅನ್ನು ವಿತರಿಸಲಾಗಿದೆ ಎಂದು ಇಲ್ಲಿನ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Heavy damage from heavy rains in district: DC
ಇತ್ತೀಚೆಗೆ ಸುರಿದ ಮಳೆಯಿಂದ ಗದ್ದೆಯಲ್ಲಿ ನಿಂತ ನೀರು

By

Published : Sep 2, 2020, 4:58 PM IST

Updated : Sep 2, 2020, 6:59 PM IST

ಧಾರವಾಡ:ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಆಸ್ತಿ ಹಾಗೂ ಬೆಳೆ ಹಾನಿಯಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ್ ತಿಳಿಸಿದರು.

ಹಾನಿ ಕುರಿತು ಮಾಹಿತಿ ನೀಡಿದ ಅವರು, ಜಿಲ್ಲೆಯಲ್ಲಿ ಸುರಿದ ಮಳೆಯಿಂದ ಇಬ್ಬರು ಸಾವನ್ನಪ್ಪಿದ್ದು, ಎರಡೂ ಕುಟುಂಬಕ್ಕೆ 5 ಲಕ್ಷ ರೂ. ಚೆಕ್​ಅನ್ನು ವಿತರಿಸಲಾಗಿದೆ. ಬಿಟ್ಟು ಬಿಡದೇ ಸುರಿದ ಮಳೆಯಿಂದ 2,135 ಮನೆಗಳಿಗೆ ಹಾನಿಯಾಗಿದ್ದು, ಅವುಗಳ ಸರ್ವೆ ಮಾಡಿಸಿ ರಾಜೀವ್​ ಗಾಂಧಿ ವಸತಿ ನಿಗಮದ ವೆಬ್​ ಸೈಟ್​ನಲ್ಲಿ ಅಪ್ಡೇಟ್​​ ಮಾಡಲಾಗಿದೆ ಎಂದರು.

ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದ ಭಾರಿ ಹಾನಿ: ಡಿಸಿ

ಪಿ.ಆರ್.ಇ.ಡಿ, ಪಿಡಬ್ಲೂಡಿ, ಬೃಹತ್​ ಮತ್ತು ಸಣ್ಣ ನೀರಾವರಿ ಇಲಾಖೆಗೆ ಸಂಬಂಧಿಸಿದ ರಸ್ತೆ ಹಾಗೂ ಬ್ರಿಡ್ಜ್​ ಸಹ ಹಾಳಾಗಿದ್ದು, ಅವುಗಳನ್ನು ಸಹ ಸಮೀಕ್ಷೆ ಮಾಡಿ ಸರ್ಕಾರಕ್ಕೆ ಕಳಿಸಲಾಗಿದೆ. ಹೆಸರು ಹಾಗೂ ಸೋಯಾಬೀನ್​ ಬೆಳೆ ಸಹ ನಷ್ಟವಾಗಿದೆ. ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆ ಸಂಪೂರ್ಣ ಬೆಳೆಹಾನಿ ಸಮೀಕ್ಷೆ ಮಾಡಿದೆ. 55 ಸಾವಿರ ಹೆಕ್ಟೇರ್​ನ​ಷ್ಟು ಬೆಳೆ ಹಾನಿಯಾಗಿದೆ. ಸಾಫ್ಟ್​ವೇರ್ ಓಪನ್ ಆದ ಬಳಿಕ ಹಾನಿಯಾದ ಕುರಿತು ಎಂಟ್ರಿ ಮಾಡಿ ಪರಿಹಾರ ವಿತರಣೆ ಮಾಡಲಾಗುವುದು. ಜಿಲ್ಲೆಯಲ್ಲಿ ಒಟ್ಟು 506 ಕೋಟಿ ರೂ. ಅಂದಾಜು ಹಾನಿಯಾಗಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.

Last Updated : Sep 2, 2020, 6:59 PM IST

ABOUT THE AUTHOR

...view details