ಹುಬ್ಬಳ್ಳಿ:ಹು- ಧಾ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ತ್ಯಾಜ್ಯ ಸಾಗಾಣಿಕೆ ಮಾಡಲು ಅವಶ್ಯವಿರುವ ವಾರ್ಡ್ಗಳಿಗೆ ಟ್ರ್ಯಾಕ್ಟರ್ ಹಾಗೂ ಟ್ರಾಲಿಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದು ಈಟಿವಿ ಭಾರತ ವರದಿಯ ಫಲಶೃತಿಯಾಗಿದೆ. ನಿನ್ನೆ(ಶುಕ್ರವಾರ) ಈಟಿವಿ ಭಾರತ "ತುಕ್ಕು ಹಿಡಿಯುತ್ತಿರುವ ಹು-ಧಾ ಮಹಾನಗರ ಪಾಲಿಕೆ ಖರೀದಿಸಿದ ಟ್ರ್ಯಾಕ್ಟರ್ಗಳು" ಎಂಬ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು.
ಈಟಿವಿ ಭಾರತ ವರದಿಯಿಂದ ಎಚ್ಚೆತ್ತುಕೊಂಡ ಮಹಾನಗರ ಪಾಲಿಕೆ ಆರ್ಟಿಒ ಅನುಮತಿ ಪಡೆದು ಟ್ರ್ಯಾಕ್ಟರ್ಗಳನ್ನು ವಾರ್ಡ್ಗಳಿಗೆ ವಿತರಿಸಿದೆ. 2021-22ನೇ ಸಾಲಿನ 15ನೇ ಹಣಕಾಸು ಯೋಜನಯಡಿ ಸರಬರಾಜು ಮಾಡಿಕೊಳ್ಳಲು ಅನುಮೋದನೆ ಪಡೆದಂತೆ ಒಟ್ಟು 35 ಟ್ರ್ಯಾಕ್ಟರ್ ಹಾಗೂ ಟ್ರಾಲಿಗಳಲ್ಲಿ 24 ಮಾರ್ಚ್ & ಏಪ್ರಿಲ್ ತಿಂಗಳಲ್ಲಿ ವಲಯ ಕಚೇರಿ ವ್ಯಾಪ್ತಿಯ ವಾರ್ಡ್ ಗಳಿಗೆ ವಿತರಿಸಲಾಗಿತ್ತು. ಉಳಿದ 11 ಟ್ರ್ಯಾಕ್ಟರ್ ಹಾಗೂ ಟ್ರಾಲಿಗಳು ಜುಲೈ ತಿಂಗಳಲ್ಲಿ ಸರಬರಾಜಾಗಿದ್ದವು. ಆರ್ಟಿಒ ನೋಂದಣಿ ಪ್ರಕ್ರಿಯೆ ಪೂರ್ಣಗೊಂಡು, ಅಗತ್ಯವಿರುವ ವಲಯ ಕಚೇರಿಯ ವಾರ್ಡ್ಗಳಿಗೆ ವಿತರಿಸಿದೆ.
ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆ ವಿವಿಧ ಯೋಜನೆಗಳಡಿ ಕೋಟ್ಯಂತರ ರೂಪಾಯಿ ಹಣ ಖರ್ಚು ಮಾಡಿ ಟ್ರ್ಯಾಕ್ಟರ್ ಖರೀದಿ ಮಾಡಿತ್ತು. ವಿಪರ್ಯಾಸವೆಂದರೆ, ಪಾಲಿಕೆ ಆಯುಕ್ತರ ನಿವಾಸದ ಹಿಂಭಾಗದಲ್ಲಿ ಕಳೆದ ಐದಾರು ತಿಂಗಳಿಂದ ಟ್ರ್ಯಾಕ್ಟರ್ಗಳು ನಿಂತಲ್ಲೇ ನಿಂತು ಬಿಸಿಲು, ಮಳೆಗೆ ತುಕ್ಕು ಹಿಡಿಯುತ್ತಿವೆ ಎಂದು ಈಟಿವಿ ಭಾರತ ವರಿದಿ ಮಾಡಿತ್ತು.