ಕರ್ನಾಟಕ

karnataka

ETV Bharat / state

'ಬಿಆರ್​​ಟಿಎಸ್'- ರಾಷ್ಟ್ರದಲ್ಲಿಯೇ ಅತಿ ಹೆಚ್ಚು ಪ್ರಯಾಣಿಕರು ಸಂಚರಿಸುವ ಸಾರಿಗೆ

ಹುಬ್ಬಳ್ಳಿ-ಧಾರವಾಡ ಬಿಆರ್​​ಟಿಎಸ್​ಗೆ ಮತ್ತೊಂದು ಗರಿ. ರಾಷ್ಟ್ರದಲ್ಲಿಯೇ ಅತಿ ಹೆಚ್ಚು ಪ್ರಯಾಣಿಕರು ಸಂಚರಿಸುವ ಸಾರಿಗೆ ಎಂಬ ಹೆಗ್ಗಳಿಕೆ.

HDBRTS wins another award
ಬಿಆರ್‌ಟಿಎಸ್ ಸಾರಿಗೆ ಪ್ರಶಸ್ತಿ

By

Published : Nov 11, 2022, 1:43 PM IST

ಹುಬ್ಬಳ್ಳಿ:ರಾಷ್ಟ್ರದ ಪ್ರತಿಷ್ಠಿತ ಸಂಸ್ಥೆ ಅರ್ಬನ್ ಇನ್ಫ್ರಾ ಕಮ್ಯುನಿಕೇಶನ್ ಗ್ರೂಪ್ ವತಿಯಿಂದ ರಾಷ್ಟ್ರೀಯ ಮಟ್ಟದಲ್ಲಿ ಸಮೂಹ ಸಾರಿಗೆ ವರ್ಗದಡಿ ನೀಡಲಾಗುವ 2022ನೇ ಸಾಲಿನ ಭಾರತದಲ್ಲಿಯೇ ಸಾರ್ವಜನಿಕರು ಅತಿ ಹೆಚ್ಚು ಬಳಸುವ ಬಿಆರ್‌ಟಿಎಸ್ ಸಾರಿಗೆ ಪ್ರಶಸ್ತಿಗೆ ಹುಬ್ಬಳ್ಳಿ- ಧಾರವಾಡ ಬಿಆರ್‌ಟಿಎಸ್(ಬಸ್ ಕ್ಷಿಪ್ರ ಸಾರಿಗೆ ವ್ಯವಸ್ಥೆ) ಯೋಜನೆ ಭಾಜನವಾಗಿದೆ.

ಬಿಆರ್‌ಟಿಎಸ್ ಸಾರಿಗೆ ಪ್ರಶಸ್ತಿ

ಸಮೂಹ ಸಾರಿಗೆ ವ್ಯವಸ್ಥೆಯ ಮೂಲಭೂತ ಸೌಕರ್ಯ, ಪ್ರಯಾಣಿಕರಿಗೆ ಕಲ್ಪಿಸಿದ ಅತ್ಯಾಧುನಿಕ ಸೌಲಭ್ಯ, ಪ್ರಯಾಣ ದರ, ಜನಸ್ನೇಹಿ ಮತ್ತು ಪರಿಸರ ಸ್ನೇಹಿ ಚಟುವಟಿಕೆ ಮತ್ತು ಭಾರತದ ಬಿಆರ್‌ಟಿಎಸ್ ಸಾರಿಗೆಯಲ್ಲಿ ಅತಿ ಹೆಚ್ಚು ಸಂಚರಿಸಿದ ಪ್ರಯಾಣಿಕರ ಅನುಪಾತದ ಆಧಾರದ ಮೇಲೆ ಈ ಪ್ರಶಸ್ತಿ ನೀಡಲಾಗಿದೆ.

ಬಿಆರ್‌ಟಿಎಸ್ ಸಾರಿಗೆ ಪ್ರಶಸ್ತಿ

ನವದೆಹಲಿಯ ಇಂಡಿಯಾ ಇಂಟರ್ ನ್ಯಾಷನಲ್ ಸೆಂಟರ್‌ನಲ್ಲಿ ನ. 7 ರಂದು ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಗರ ಭೂ ಸಾರಿಗೆ ನಿರ್ದೇಶನಾಲಯದ ಆಯುಕ್ತ ಮತ್ತು ಸರ್ಕಾರದ ಪದನಿಮಿತ್ತ ಅಪರ ಮುಖ್ಯ ಕಾರ್ಯದರ್ಶಿ ವಿ. ಮಂಜುಳಾ , ಹೆಚ್​​ಡಿಬಿಆರ್‌ಟಿಎಸ್ ಕಂ.ನಿ. (ಪ್ರಧಾನ ವ್ಯವಸ್ಥಾಪಕ ಐಟಿಎಸ್ ಕಾರ್ಯಾಚರಣೆ) ಎಂ. ರಾಜಕುಮಾರ ಮತ್ತು ಹುಬ್ಬಳ್ಳಿ - ಧಾರವಾಡ ನಗರ ಸಾರಿಗೆಯ ವಿಭಾಗೀಯ ನಿಯಂತ್ರಣಾಧಿಕಾರಿ ವಿವೇಕಾನಂದ ವಿಶ್ವಜ್ಞ ಭಾಗವಹಿಸಿ ಪ್ರಶಸ್ತಿ ಸ್ವೀಕರಿಸಿದರು.

ಈವರೆಗೆ ಪಡೆದ ಪ್ರಶಸ್ತಿಗಳು:

  • 2019ರಲ್ಲಿ ಭಾರತ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಉತ್ತಮ ನಗರ ಸಮೂಹ ಸಾರಿಗೆ ಯೋಜನೆಯಡಿ ವಸತಿ ಶ್ರೇಷ್ಠತಾ ಪ್ರಶಸ್ತಿ.
  • 2020ರಲ್ಲಿ ಪರಿಸರ ಹಾಗೂ ಸುಸ್ಥಿರ ಸಾರಿಗೆ ವಿಭಾಗದಲ್ಲಿ ರಾಷ್ಟ್ರಮಟ್ಟದ ಸ್ವರ್ಣ ಪ್ರಶಸ್ತಿ.
  • 2021 ರಲ್ಲಿ ಭಾರತ ಸರ್ಕಾರದ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಉತ್ತಮ ನಗರ ಸಮೂಹ ಸಾರಿಗೆ ಯೋಜನೆಯಡಿ ಶ್ರೇಷ್ಠತಾ ಪ್ರಶಸ್ತಿಗೆ ಹುಬ್ಬಳ್ಳಿ- ಧಾರವಾಡ ಬಿಆರ್‌ಟಿಎಸ್‌ ಯೋಜನೆ ತನ್ನದಾಗಿಸಿಕೊಂಡಿತ್ತು. ಈಗ ಮತ್ತೊಂದು ಗರಿಮೆ ಸಿಕ್ಕಿದೆ.

ಇದನ್ನೂ ಓದಿ:ನಗರ ಭೂ ಸಾರಿಗೆ ನಿರ್ದೇಶನಾಲಯ ಮತ್ತು ಬಿಎಂಆರ್​ಸಿಎಲ್ ಸಂಸ್ಥೆಗೆ ಅತ್ಯುತ್ತಮ ನಗರ ಸಾರಿಗೆ ಶ್ರೇಷ್ಠತಾ ಪ್ರಶಸ್ತಿ..

ABOUT THE AUTHOR

...view details