ಹುಬ್ಬಳ್ಳಿ:ರಾಜ್ಯ ಹಾಗೂ ದೇಶ ಎಂಬುವುದು ಸರ್ವ ಜನಾಂಗದ ಶಾಂತಿಯ ತೋಟ. ಶಾಂತಿ ಕದಡಲು ಬಿಡಬೇಡಿ. ಸರ್ಕಾರ ಜನರದ್ದು, ಜನರನ್ನು ಕಾಪಾಡಬೇಕು ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು. ಮುಸ್ಲಿಂ ವ್ಯಾಪಾರಸ್ಥರಿಗೆ ವ್ಯಾಪಾರ ಬ್ಯಾನ್ ಮಾಡಿದ್ದಾರೆ. ಈ ರೀತಿಯ ವಾತಾವರಣದಿಂದ ಏನನ್ನು ಸಾಧನೆ ಮಾಡ್ತೀರಿ?, ಅಧಿಕಾರಕ್ಕಾಗಿ ರಕ್ತದೋಕುಳಿ ಆಡಬೇಕಾ? ಸಾಮರಸ್ಯ ಕೆಡಿಸಿ ಬದುಕುವುದಾದ್ರೂ ಎಷ್ಟು ದಿನ? ಎಂದರು.
ಬಿಜೆಪಿ ವಿರುದ್ಧ ವಾಗ್ದಾಳಿ:ಮುಸ್ಲಿಮರು ಕೋರ್ಟ್ ತೀರ್ಪಿನ ವಿರುದ್ಧ ಅಸಮಾಧಾನ ವ್ಯಕ್ತಪಡಿಸಲು ಬಂದ್ ಮಾಡಿದ್ದಾರೆ. ಹಿಂದೂಗಳ ಹೆಸರಿನಲ್ಲಿ ನಾಲ್ಕು ದಿನ ಅಧಿಕಾರ ಪಡೆಯಬಹುದು. ಇದು ಯಾರಿಗೂ ಶ್ರೇಯಸ್ಸು ತರುವುದಿಲ್ಲ. ಜನರ ರಕ್ತದ ಮೇಲೆ ನೀವು ಅಧಿಕಾರ ಮಾಡಬೇಕಾ?. ದಿನನಿತ್ಯ ಬಳಕೆ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಆ ಬಗ್ಗೆ ಗಮನ ಕೊಡಿ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.