ಕರ್ನಾಟಕ

karnataka

ETV Bharat / state

ಹುಬ್ಬಳ್ಳಿಯಲ್ಲಿ ಎಸ್​​ಡಿಪಿಐ ಮುಖಂಡನ ಮನೆ ಮೇಲೆ‌ ಎನ್ಐಎ ದಾಳಿ - ಎಸ್​​ಡಿಪಿಐ ಮುಖಂಡನ ಮನೆ ಮೇಲೆ‌ ಎನ್ಐಎ ದಾಳಿ

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್​​ಡಿಪಿಐ ಮುಖಂಡ ಇಸ್ಮಾಯಿಲ್ ನಾಲಬಂದ್ ಮನೆ ಮೇಲೆ‌ ಶನಿವಾರ ಬೆಳಗ್ಗೆ ಎನ್ಐಎ ದಾಳಿ ಮಾಡಿ ಪರಿಶೀಲನೆ ನಡೆಸಿದೆ.

NIA raid on SDPI Ismails house on Saturday
ಎಸ್ ಡಿಪಿಐ ಇಸ್ಮಾಯಿಲ್ ಮನೆ ಮೇಲೆ‌ ಶನಿವಾರ ಎನ್ಐಎ ದಾಳಿ

By

Published : Nov 5, 2022, 11:52 AM IST

ಹುಬ್ಬಳ್ಳಿ: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್​​ಡಿಪಿಐ ಮುಖಂಡ ಇಸ್ಮಾಯಿಲ್ ನಾಲಬಂದ್ ಮನೆ ಮೇಲೆ‌ ಎನ್ಐಎ ದಾಳಿ ಮಾಡಿ ಪರಿಶೀಲನೆ ನಡೆಸಿದೆ.

ಶನಿವಾರ ನಸುಕಿನ ಜಾವ 4 ಗಂಟೆಗೆ ಸುಮಾರು ನಾಲ್ಕು ಗಂಟೆಗೆ ಎನ್ಐಎ 10 ಜನ ಅಧಿಕಾರಿಗಳ ತಂಡವೂ ಹಳೇ‌ ಹುಬ್ಬಳ್ಳಿಯ ನುರಾನಿ ಪ್ಲಾಟ್​​ನ ಮನೆಯ ಮೇಲೆ ದಾಳಿ ಮಾಡಿ ಶೋಧ ಕಾರ್ಯ ನಡೆಸಿದೆ. ನಂತರ ಕಸಬಾಪೇಟ್ ಪೊಲೀಸ್ ಠಾಣೆ ವ್ಯಾಪ್ತಿಯ ಎಸ್​​ಡಿಪಿಐ ಕಚೇರಿಯಲ್ಲೂ ಪರಿಶೀಲಿಸಿರುವ ಮಾಹಿತಿ ಲಭ್ಯವಾಗಿದೆ.

ಈ ಮಧ್ಯೆ ದಕ್ಷಿಣ ಕನ್ನಡ ಹಾಗೂ ಮೈಸೂರು ಜಿಲ್ಲೆಗಳಲ್ಲೂ ಇಂದು ಬೆಳಗ್ಗೆ ಎನ್​ಐಎ ಏಕಕಾಲಕ್ಕೆ ದಾಳಿ ನಡೆಸಿ, ಕೆಲವರನ್ನು ವಶಕ್ಕೆ ಪಡೆದಿದೆ.

ABOUT THE AUTHOR

...view details