ಕರ್ನಾಟಕ

karnataka

ETV Bharat / state

ಬಿಜೆಪಿ ರಚಿಸಿರುವುದು ವಾಮ ಮಾರ್ಗದ ಸರ್ಕಾರ: ಶ್ರೀನಿವಾಸ್​ ಮಾನೆ - ರಾಜ್ಯ ಸಚಿವ ಸಂಪುಟ

ರಾಜ್ಯ ಸಚಿವ ಸಂಪುಟದಲ್ಲಿ ಮೂಲ ಬಿಜೆಪಿಗರನ್ನು ಕಡೆಗಣಿಸಲಾಗಿದೆ. ಉಳಿದಿರುವ ಸಚಿವ ಸ್ಥಾನಗಳನ್ನು ಅನರ್ಹ ಶಾಸಕರಿಗಾಗಿ ಬಿಟ್ಟಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ ಆರೋಪಿಸಿದ್ದಾರೆ.

ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ

By

Published : Aug 22, 2019, 12:01 AM IST

ಧಾರವಾಡ: ರಾಜ್ಯ ಸಚಿವ ಸಂಪುಟ ರಚನೆಯಲ್ಲಿ ಮೂಲ ಬಿಜೆಪಿಗರಲ್ಲಿ ಅಸಮಾಧಾನ ಉಂಟಾಗಿದೆ. ಬಹಳಷ್ಟು ಶಾಸಕರಿಗೆ ಸರ್ಕಾರವೇ ಬೇಡವಾಗಿದೆ.‌ ಚುನಾವಣೆ ನಡೆಸಿ ಸ್ವಂತ ಬಲದ ಮೇಲೆ ಸರ್ಕಾರ ರಚಿಸುವುದು ಒಳ್ಳೆಯದು ಎಂದು ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ್​ ಮಾನೆ ಹೇಳಿದರು.

ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅರ್ಧಕ್ಕಿಂತ ಹೆಚ್ಚು ಸಚಿವ ಸ್ಥಾನ ಖಾಲಿ ಇವೆ. 34 ಸಚಿವ ಸ್ಥಾನಗಳಲ್ಲಿ 18 ಶಾಸಕರಿಗೆ ಮಾತ್ರ ಸಚಿವ ಸ್ಥಾನ ನೀಡಲಾಗಿದೆ. ಉಳಿದ 15 ಸ್ಥಾನ ಖಾಲಿ ಇವೆ. ಇದರ ಅರ್ಥ ಇದು ಸ್ಥಿರ ಸರ್ಕಾರ ಅಲ್ಲ. ಇವರು ಅನರ್ಹರೊಂದಿಗೆ ಮೊದಲೇ ಒಪ್ಪಂದ ಮಾಡಿಕೊಂಡು ಸರ್ಕಾರ ಮಾಡಿದ್ದಾರೆ ಎಂದು ಆರೋಪಿಸಿದರು.

ಅನರ್ಹರು ಕೋರ್ಟ್ ಕೇಸ್ ಮುಗಿಸಿಕೊಂಡು‌ ಸಚಿವರಾಗುತ್ತೇವೆ ಎಂದು ಹೇಳುತ್ತಿದ್ದಾರೆ. ವಾಮ ಮಾರ್ಗದಿಂದ ಬಂದಿರುವ ಸರ್ಕಾರ ಅದೆಷ್ಟು ದಿನ ಉಳಿಯುತ್ತದೆ ಗೊತ್ತಿಲ್ಲವೆಂದು ಮಾನೆ ಹೇಳಿದ್ರು.

ABOUT THE AUTHOR

...view details