ಹುಬ್ಬಳ್ಳಿ: ಅವಳಿ ನಗರದ ಪೊಲೀಸ್ ಕಮೀಷನರೇಟ್ನಲ್ಲಿನ ಉನ್ನತ ಅಧಿಕಾರಿಗಳ ಒಳ ಜಗಳ ಮತ್ತೆ ಬಹಿರಂಗಗೊಂಡಿದೆ. ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರ್ ಆರ್.ದಿಲೀಪ್ ಅವರು ಓರ್ವ ಕರ್ತವ್ಯದಲ್ಲಿರುವ ಡಿಸಿಪಿ ಭೇಟಿಗೂ ಅವಕಾಶ ನೀಡುತ್ತಿಲ್ಲ ಎಂದು ಕಾನೂನು ಸುವ್ಯವಸ್ಥೆ ಡಿಸಿಪಿ ಕೃಷ್ಣಕಾಂತ್ ಪತ್ರದ ಮೂಲಕ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಅವಳಿ ನಗರದಲ್ಲಿ ನಡೆದ ಪ್ರಕರಣಗಳ ಬಗ್ಗೆ ಸಲಹೆ ಸೂಚನೆ ಪಡೆಯಲು ಹಾಗೂ ಮಾರ್ಗದರ್ಶನ ಪಡೆಯಲು ಡಿಸಿಪಿ ಕೃಷ್ಣಕಾಂತ್ ಅವರು ಹಲವು ಬಾರಿ ಪ್ರಯತ್ನ ಮಾಡಿದ್ದಾರಂತೆ. ಆದರೆ ಅವರ ಭೇಟಿಗೆ ಹಾಗೂ ಫೋನ್ ಕರೆಗೂ ಕಮೀಷನರ್ ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ಆರೋಪಿಸಲಾಗಿದೆ.
ಡಿಸಿಪಿ ಕೃಷ್ಣಕಾಂತ್ ಬರೆದ ಪತ್ರ ಕಳೆದ ಫೆಬ್ರವರಿಯಿಂದ ಕೃಷ್ಣಕಾಂತ್ ಡಿಸಿಪಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವಳಿ ನಗರದ ಕ್ರೈಂ ಚಟುವಿಕೆ ಬಗ್ಗೆ ಚರ್ಚಿಸಲು ಭೇಟಿಗೆ ಅವಕಾಶ ಕೇಳಿದ್ದು, ಡಿಸಿಪಿ ಭೇಟಿಗೆ ನಿರಕಾರಿಸುತ್ತಿದ್ದಾರಂತೆ. ಹೀಗಾಗಿ ಇದರಿಂದ ಬೇಸತ್ತ ಡಿಸಿಪಿ ಕೊನೆಗೆ ಕಮೀಷನರ್ ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ತಮಗಾದ ಅನುಭವವನ್ನು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಮುಂಚೆಯಿಂದಲೂ ಇಬ್ಬರು ಅಧಿಕಾರಿಗಳ ನಡುವೆ ದೊಡ್ಡ ಮಟ್ಟದ ಶಿತಲ ಸಮರ ಇದೆ. ಸರ್ಕಾರದ ಒಂದು ಫಂಡ್ಗಾಗಿ ಕಮೀಷನರ್ ಡಿಸಿಪಿ ವಿರುದ್ಧ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಡಿಸಿಪಿಯನ್ನ ಗಣನೆಗೆ ತೆಗದುಕೊಳ್ಳುತ್ತಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ.
ಕಳೆದ ತಿಂಗಳು ಡಿಜಿಯೇ ಖುದ್ದು ಡಿಸಿಪಿಯನ್ನ ನೋಡಲ್ ಅಧಿಕಾರಿ ಮಾಡಿದ್ದರು. ಅಲ್ಲದೆ ಗೃಹ ಸಚಿವರು ಕೂಡ ಕಮೀಷನರ್ಗೆ ಎಚ್ಚರಿಕೆ ನೀಡಿದ್ದರು.