ಕರ್ನಾಟಕ

karnataka

ETV Bharat / state

ಚೇತರಿಕೆಯತ್ತ ಕೈಗಾರಿಕೋದ್ಯಮ, ಮಂದಹಾಸದಲ್ಲಿ ಕೈಗಾರಿಕೋದ್ಯಮಿಗಳು

ಕೈಗಾರಿಕೆಗಳು ಬಾಗಿಲು ಹಾಕಿದ್ದರಿಂದ ಊರುಗಳಿಗೆ ತೆರಳಿದ್ದ ಕಾರ್ಮಿಕರಲ್ಲಿ ಅರ್ಧದಷ್ಟು ಕೆಲಸಕ್ಕೆ ಮರಳಿದ್ದಾರೆ. ಈ ಮೂಲಕ ಕಚ್ಚಾ ವಸ್ತುಗಳ ಸರಬರಾಜು ಹಾಗೂ ಸಾರಿಗೆ ವ್ಯವಸ್ಥೆ ಸರಾಗವಾಗಿ ಸಾಗಿದ್ದು, ಕೈಗಾರಿಕೆಗಳು ಚೇತರಿಕೆಯತ್ತ ಮುಖ ಮಾಡುತ್ತಿವೆ..

Ministry of Micro, Small and Medium Enterprises
ಸಣ್ಣ ಹಾಗೂ ಮಧ್ಯಮ ಉದ್ದಿಮೆ ಮತ್ತು ಅಭಿವೃದ್ಧಿ ಸಂಸ್ಥೆ

By

Published : Dec 15, 2020, 1:03 PM IST

ಹುಬ್ಬಳ್ಳಿ :ಆರ್ಥಿಕ ಹಿಂಜರಿತದಿಂದ ಬಸವಳಿದಿದ್ದ ಸಣ್ಣ ಕೈಗಾರಿಕೆಗಳು ಕೊರೊನಾ ಹೊಡೆತಕ್ಕೆ ಮತ್ತಷ್ಟು ಪಾತಾಳಕ್ಕಿಳಿದಿವೆ. ಧಾರವಾಡದಲ್ಲಿರುವ ಸುಮಾರು 3 ಸಾವಿರ ಸಣ್ಣ ಹಾಗೂ ಮಧ್ಯಮ ‌ಕೈಗಾರಿಕೆಗಳು (ಎಂಎಸ್​​​ಎಂಇ) ನಲುಗಿದ್ದು, ಸಣ್ಣಪುಟ್ಟ ಕೈಗಾರಿಕೆಗಳು ಬಾಗಿಲು ಹಾಕಿವೆ.

ಲಾಕ್‌ಡೌನ್‌ನಿಂದ ಕೆಲಸ ಇಲ್ಲದೆ ಈ ಕೈಗಾರಿಕೆಗಳ ಮಾಲೀಕರು ತಲೆ ಮೇಲೆ ಕೈಹೊತ್ತು ಕುಳಿತ್ತಿದ್ರೆ, ಕಾರ್ಮಿಕರಿಗೆ ದಿಕ್ಕುದೆಸೆ ಇಲ್ಲದಂತಾಗಿದೆ. ಈ ಹಿಂದಿನ ಕೆಲಸದ ಬಿಲ್‌ಗಳು ಬಾಕಿ ಉಳಿದಿರುವುದು ಒಂದೆಡೆಯಾದ್ರೆ, ಬ್ಯಾಂಕ್​​ಗಳಿಂದ ಪಡೆದ ಸಾಲದ ಬಡ್ಡಿ, ವಿದ್ಯುತ್ ಬಿಲ್, ನಗರಸಭೆ, ವಾಣಿಜ್ಯ ಇಲಾಖೆಗೆ ತೆರಿಗೆ ಪಾವತಿಸುವ ತೂಗುಗತ್ತಿ ಮಾಲೀಕರನ್ನು ಕಾಡುತ್ತಿದೆ.

ಮಂದಹಾಸದಲ್ಲಿ ಕೈಗಾರಿಕೋದ್ಯಮಿಗಳು

ಆಹಾರೋತ್ಪನ್ನ, ಕೃಷಿ ಆಧಾರಿತ ಉತ್ಪನ್ನಗಳ ತಯಾರಿಕೆ ಹಾಗೂ ಜವಳಿ ಉದ್ಯಮ ಕೋವಿಡ್ ಹೊಡೆತದಿಂದ ಬೇಗ ಹೊರ ಬಂದಿವೆ‌. ಬಿಡಿಭಾಗಗಳ ತಯಾರಿಕೆ ಹಾಗೂ ಕಚ್ಚಾ ವಸ್ತುಗಳ ಪೂರೈಕೆಯಲ್ಲಿ ಹೆಚ್ಚಿನ ‌ಪ್ರಗತಿ‌ ಕಾಣುತ್ತಿದೆ.

ಈ ಕೈಗಾರಿಕೆಗಳಲ್ಲಿ ಆದ ಬದಲಾವಣೆ ಎಲ್ಲಾ ಕೈಗಾರಿಗಳ ಮೇಲೂ ಆಶಾಭಾವನೆ ಹೆಚ್ಚಿಸಿದೆ. ಕೇಂದ್ರ ಸರ್ಕಾರ ಘೋಷಿಸಿರುವ ವಿಶೇಷ ಪ್ಯಾಕೇಜ್​​ನಂತೆ ಜಿಎಸ್‌ಟಿ, ತೆರಿಗೆಯಿಂದ ವಿನಾಯಿತಿ ಹಾಗೂ ಕೈಗಾರಿಕೆ ಕ್ಷೇತ್ರದ ಪ್ರಗತಿಗೆ ವಿಶೇಷ ಪ್ಯಾಕೇಜ್‌ ಪ್ರಕಟಿಸಬೇಕಿದೆ ಎಂಬ ಒತ್ತಾಯವೂ ಕೇಳಿ ಬರುತ್ತಿದೆ.

ABOUT THE AUTHOR

...view details