ಕರ್ನಾಟಕ

karnataka

ETV Bharat / state

ಧಾರವಾಡ: ಹಾರೋಬೆಳವಡಿ-ಇನಾಂಹೊಂಗಲ ಮಧ್ಯದ ಸೇತುವೆ ಮುಳುಗಡೆ - Dharwad bridge sink news

ಈ ವರ್ಷದ ಮಳೆಗೆ ಮೇಲಿಂದ ಮೇಲೆ ಹಾರೋಬೆಳವಡಿ-ಇನಾಂಹೊಂಗಲ ಮಧ್ಯದ ಸೇತುವೆ ಮುಳುಗಡೆಯಾಗುತ್ತಿದ್ದು, ಸಂಚಾರ ಬಂದ್ ಮಾಡಲಾಗಿದೆ.

Bridge
Bridge

By

Published : Sep 7, 2020, 1:14 PM IST

ಧಾರವಾಡ: ನಿನ್ನೆ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಹಾರೋಬೆಳವಡಿ-ಇನಾಂಹೊಂಗಲ ಮಧ್ಯದ ಸೇತುವೆ ಮತ್ತೆ ಮುಳುಗಡೆಯಾಗಿದೆ.

ಸವದತ್ತಿ, ಮುನವಳ್ಳಿ, ಯರಗಟ್ಟಿ, ಲೋಕಾಪುರ, ಮುಧೋಳ, ಜಮಖಂಡಿ ಸೇರಿದಂತೆ ವಿಜಯಪುರಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಇದಾಗಿದ್ದು, ಕಳೆದ ವರ್ಷದ ಮಳೆಗೆ ಸೇತುವೆಯೇ ಕೊಚ್ಚಿ ಹೋಗಿತ್ತು. ಬಹಳ ದಿನಗಳ ನಂತರ ಸೇತುವೆ ಮರು ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಆದರೆ ಪ್ರಸಕ್ತ ವರ್ಷದ ಮಳೆಗೆ ಮೇಲಿಂದ ಮೇಲೆ ಸೇತುವೆ ಮುಳುಗಡೆಯಾಗುತ್ತಿದ್ದು, ಕಾಮಗಾರಿಗೆ ಅಡ್ಡಿಯಾಗುತ್ತಿದೆ.

ನಿನ್ನೆ ರಾತ್ರಿ ಸುರಿದ ಮಳೆಯಿಂದಾಗಿ ಮತ್ತೆ ಸೇತುವೆ ರಸ್ತೆ ಮುಳುಗಡೆಯಾಗಿದೆ. ಅಲ್ಲದೆ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದ್ದ ಪರ್ಯಾಯ ರಸ್ತೆ ಕೂಡ ಮುಳುಗಡೆಯಾಗುವ ಸಾಧ್ಯತೆ ಇದೆ.

ABOUT THE AUTHOR

...view details