ಹುಬ್ಬಳ್ಳಿ: ಸತತವಾಗಿ ಸುರಿದ ಬಾರಿ ಮಳೆಯಿಂದಾಗಿ ಹೆಸರು ಬೆಳೆಗಳಿಗೆ ಕೆಂಪು ಹುಳುಗಳು ಕಾಟ ಆರಂಭವಾಗಿದ್ದು, ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದ ಹಾಗಾಗಿದೆ.
ಮುಂಗಾರು ಹೆಸರು ಬೆಳೆಗೆ ಹುಳು ಕಾಟ: ಹುಬ್ಬಳ್ಳಿಯಲ್ಲಿ ಅನ್ನದಾತ ಕಂಗಾಲು - moong dal
ಹುಬ್ಬಳ್ಳಿ ಭಾಗದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಬೆಳೆಗೆ ಹುಳುಗಳು ಮೆತ್ತಿಕೊಂಡಿದ್ದು, ರೈತರು ಕಂಗಾಲಾಗಿದ್ದಾರೆ.
ಹುಬ್ಬಳ್ಳಿಯಲ್ಲಿ ಅನ್ನದಾತ ಕಂಗಾಲು
ಹೌದು ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಸತತವಾಗಿ ಸುರಿಯುತ್ತಿರುವ ಮಳೆ ಆರ್ಭಟದಿಂದ ಮುಂಗಾರು ಬೆಳೆಗಳಿಗೆ ಹುಳುಗಳು ಹತ್ತಿ ರೈತರಲ್ಲಿ ಆತಂಕ ಸೃಷ್ಟಿಯಾಗಿದೆ. ಇನ್ನೇನು ಹೆಸರು ಬಿಡಿಸಿ ಭರಪೂರ ಲಾಭದ ನಿರೀಕ್ಷೆಯಲ್ಲಿದ್ದ ರೈತನಿಗೆ ಮಳೆರಾಯ ಶಾಕ್ ನೀಡಿದ್ದಾನೆ.
ಇದರಿಂದ ಜಿಲ್ಲೆಯ ರೈತರಿಗೆ ಮುಂಗಾರು ಕೈ ಕೊಡುವ ಭೀತಿ ಎದುರಾಗಿದ್ದು, ಸರ್ಕಾರ ರೈತರ ಪರಿಸ್ಥಿತಿ ನೋಡಿ ಪರಿಹಾರ ನೀಡುವಂತೆ ರೈತರು ಮನವಿ ಮಾಡಿದ್ದಾರೆ.