ಕರ್ನಾಟಕ

karnataka

ETV Bharat / state

ಇಎಸ್​ಐ ಆಸ್ಪತ್ರೆ ಸಿಬ್ಬಂದಿಗೆ ಕಿರುಕುಳ ಆರೋಪ: ಆತ್ಮಹತ್ಯೆ ನಿರ್ಧಾರ ಮಾಡಿದ ನೌಕರನ ಕುಟುಂಬ - ಹುಬ್ಬಳ್ಳಿ ಕಾರವಾರ ರಸ್ತೆಯಲ್ಲಿರುವ ಕಾರ್ಮಿಕ ರಾಜ್ಯ ವಿಮಾ ಆಸ್ಪತ್ರೆ

ಹುಬ್ಬಳ್ಳಿ ಕಾರವಾರ ರಸ್ತೆಯಲ್ಲಿರುವ ಕಾರ್ಮಿಕ ರಾಜ್ಯ ವಿಮಾ ಆಸ್ಪತ್ರೆಯ ಸಿಬ್ಬಂದಿಯೊಬ್ಬರು ಮತ್ತೊಬ್ಬ ಸಿಬ್ಬಂದಿಗೆ ಕಿರುಕುಳ ನೀಡುತ್ತಿರುವ ಆರೋಪ ಕೇಳಿ ಬಂದಿದೆ. ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತಿರುವ ಕುಟುಂಬ ಇದೀಗ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದೆ.

ಶಾಂತಾ ಪ್ರಶಾಂತಕುಮಾರ್ ಹೊಸಳ್ಳಿ
ಶಾಂತಾ ಪ್ರಶಾಂತಕುಮಾರ್ ಹೊಸಳ್ಳಿ

By

Published : May 17, 2022, 8:23 PM IST

ಹುಬ್ಬಳ್ಳಿ: ಶಾಂತಾ ಪ್ರಶಾಂತಕುಮಾರ್ ಹೊಸಳ್ಳಿ ಎಂಬುವವರ ಗಂಡ ಆಸ್ಪತ್ರೆಯೊಂದರಲ್ಲಿ ಕ್ಲರ್ಕ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಸೇವೆ ನಂಬಿಕೊಂಡ ಕುಟುಂಬಕ್ಕೆ ಈಗ ಸಂಕಷ್ಟ ಎದುರಾಗಿದೆ. ಇತ್ತ ವೇತನವೂ ಇಲ್ಲದೇ, ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತಿರುವ ಕುಟುಂಬ ಇದೀಗ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದೆ.

ಮಹಿಳೆಯ ಗಂಡ ಪ್ರಶಾಂತಕುಮಾರ್ ಹುಬ್ಬಳ್ಳಿಯ ಕಾರವಾರ ರಸ್ತೆಯಲ್ಲಿರುವ ಇಎಸ್ಐ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸುಮಾರು ಐದಾರೂ ತಿಂಗಳಿನಿಂದ ವೇತನ ಇಲ್ಲದೇ ಕರ್ತವ್ಯ ನಿರ್ವಹಣೆ ಮಾಡುವಂತಾಗಿದೆ‌. ಇಷ್ಟೆ ಆಗಿದ್ದರೇ ಈ ಕುಟುಂಬ ಹೇಗೋ ಜೀವನ ನಡೆಸುತ್ತಿತ್ತು. ಆದರೆ, ಇಲ್ಲಿ ಆಗುತ್ತಿರುವುದು ಮಾತ್ರ ಬೇರೆ. ಇಲ್ಲಿ ಸಿಬ್ಬಂದಿಯೊಬ್ಬರು ಪ್ರಶಾಂತಕುಮಾರ್​ಗೆ ಕಿರುಕುಳ ನೀಡುತ್ತಿದ್ದು, ಬೇಕಾಬಿಟ್ಟಿಯಾಗಿ ವರ್ಗಾವಣೆ ಮಾಡುವ ಮೂಲಕ ದರ್ಪ ಮೆರೆಯುತ್ತಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಅಲ್ಲದೇ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಕಣ್ಣೀರು ಹಾಕುತ್ತಿದ್ದಾರೆ

ಶಾಂತಾ ಪ್ರಶಾಂತಕುಮಾರ್ ಹೊಸಳ್ಳಿ

ಇನ್ನೂ 2006 ರಂದು ಸೇವೆಗೆ ಸೇರಿರುವ ಪ್ರಶಾಂತಕುಮಾರ್ ರಾಜ್ಯದ ಹಲವಾರು ಕಡೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಆದರೆ, ಹುಬ್ಬಳ್ಳಿ ಕಾರವಾರ ರಸ್ತೆಯಲ್ಲಿರುವ ಕಾರ್ಮಿಕ ರಾಜ್ಯ ವಿಮಾ ಆಸ್ಪತ್ರೆಯಲ್ಲಿ ಅಧಿಕಾರಿಗಳ ಕಿರುಕುಳ ಹಾಗೂ ಅನಧಿಕೃತವಾಗಿ ವೇತನ ತಡೆಹಿಡಿಯುವ ಮೂಲಕ ಕುಟುಂಬದ ನಿರ್ವಹಣೆ ಜೊತೆಗೆ ಆಟ ಆಡುತ್ತಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದ ನೌಕರನ ಹೆಂಡತಿ ಶಾಂತಾ ಈಗ ಸಾಮೂಹಿಕವಾಗಿ ಧರಣಿ ನಡೆಸುವುದಾಗಿ ಹೇಳಿದ್ದಾರೆ. ಒಂದು ವೇಳೆ ಧರಣಿಗೂ ಯಾವುದೇ ರೀತಿಯಲ್ಲಿ ಸ್ಪಂದನೆ ಸಿಗದೇ ಇದ್ದಲ್ಲಿ ಆಸ್ಪತ್ರೆಯ ಮುಂದೆಯೇ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ:ತಂದೆ ಮದ್ಯಪಾನ ವ್ಯಸನಿ; 'ಅಧ್ಯಯನಕ್ಕಾಗಿ ಸಹಾಯ ಮಾಡಿ'.. ಸಿಎಂ ಎದುರು ವಿದ್ಯಾರ್ಥಿಯ ಮನವಿ

For All Latest Updates

TAGGED:

ABOUT THE AUTHOR

...view details