ಹುಬ್ಬಳ್ಳಿ:ಇಲ್ಲಿನ ಕೇಶ್ವಾಪುರದ ಸೇವಾ ಭಾರತಿ ಟ್ರಸ್ಟ್‌ನ ಮಾತೃಛಾಯಾ ಬಾಲಮಂದಿರದಲ್ಲಿ 18 ವರ್ಷ ತುಂಬಿರುವ ಗುರುಸಿದ್ದಮ್ಮ ಎಂಬುವರನ್ನು ಹೇಮಂತ್‌ಕುಮಾರ್ ಎಂಬುವರು ಗುರುಹಿರಿಯರ ಸಮ್ಮುಖದಲ್ಲಿ ವಿವಾಹವಾಗಿದ್ದಾರೆ. ಹೇಮಂತ್‌ಕುಮಾರ್ ಬೆಂಗಳೂರಿನ ಸರಸ್ವತಿ ಮತ್ತು ನಂಜುಂಡರಾವ್ ಅವರ ಮಗನಾಗಿದ್ದಾರೆ.
ಆರ್‌ಎಸ್‌ಎಸ್ ಮುಖಂಡರು, ಸ್ಥಳೀಯ ಜನಪ್ರತಿನಿಧಿಗಳು, ಗಣ್ಯರು ಹಾಗೂ ನಗರದ ನಿವಾಸಿಗಳು ಈ ಕಲ್ಯಾಣ ಕಾರ್ಯದಲ್ಲಿ ಭಾಗವಹಿಸಿದ್ದರು. ಹಿರಿಯರು ಸುಖವಾಗಿ ಬಾಳಿ ಎಂದು ಆಶೀರ್ವದಿಸಿದರು. ಬಾಲಮಂದಿರದ ಮಕ್ಕಳು ಮತ್ತು ಪೋಷಕರು ಕಣ್ಣೀರು ಸುರಿಸುತ್ತ ಯುವತಿಯನ್ನು ಗಂಡನ ಮನೆಗೆ ಕಳುಹಿಸಿಕೊಟ್ಟರು.