ಧಾರವಾಡ:ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಗೆ ಧಾರವಾಡ ತಾಲೂಕಿನ ಕೋಟೂರ ಗ್ರಾಮ ಪಂಚಾಯತಿ ವ್ಯಾಪ್ತಿಯ ಗುರುನಾಥ ಕೆರೆ ಏರಿ ಕುಸಿದಿದ್ದು, ಇದರಿಂದಾಗಿ ರೈತರಲ್ಲಿ ಆತಂಕ ಮನೆ ಮಾಡಿದೆ.
ಧಾರಾಕಾರ ಮಳೆಗೆ ಕೆರೆ ಏರಿ ಕುಸಿತ: ರೈತರಲ್ಲಿ ಹೆಚ್ಚಿದ ಆತಂಕ - ಧಾರವಾಡ ಜಿಲ್ಲೆಯಲ್ಲಿ ಮಳೆಗೆ ಕೆರೆ ಕಟ್ಟೆ ಕುಸಿತದ ಆತಂಕ
ಧಾರವಾಡ ತಾಲೂಕಿನ ಕೋಟೂರ ಗ್ರಾಮ ಪಂಚಾಯತಿ ವ್ಯಾಪ್ತಿಯ ಗುರುನಾಥ ಕೆರೆ ಏರಿ ಮಳೆಗೆ ಕುಸಿದಿದ್ದು, ಒಂದು ವೇಳೆ ಕೆರೆಯ ಕಟ್ಟೆ ಸಂಪೂರ್ಣ ಒಡೆದರೆ ಜಮೀನಿಗೆ ನೀರು ನುಗ್ಗುವ ಆತಂಕದಲ್ಲಿ ಗ್ರಾಮಸ್ಥರಿದ್ದಾರೆ.
ಧಾರವಾಡ
ಅಧಿಕ ಮಳೆಯಿಂದ ಕೆರೆಯ ಕಟ್ಟೆ ಕುಸಿತ ಕಂಡಿದ್ದು, ಭತ್ತ ಹಾಗೂ ಇತರೆ ಬೆಳೆಗಳನ್ನು ಬೆಳೆದ ರೈತರಿಗೆ ಸಂಕಷ್ಟ ಎದುರಾಗಿದೆ. ಕೆರೆಯಲ್ಲಿ ಅಪಾರ ಪ್ರಮಾಣದ ನೀರು ತುಂಬಿರುವುದರಿಂದ ಒಂದು ವೇಳೆ ಕೆರೆ ಏರಿ ಸಂಪೂರ್ಣ ಒಡೆದರೆ ಹೊಲ-ಗದ್ದೆಗಳಿಗೆ ನೀರು ಹರಿದು ಭತ್ತದ ಬೆಳೆ ಕೊಚ್ಚಿ ಹೋಗುವ ಸಾಧ್ಯತೆ ಇದೆ.