ಹುಬ್ಬಳ್ಳಿ : ಪುನೀತ್ ರಾಜ್‍ಕುಮಾರ್ ನಿಧನರಾಗಿ ತಿಂಗಳುಗಳೇ ಕಳೆದರೂ ಹುಬ್ಬಳ್ಳಿಯ ಜನರಲ್ಲಿ ಮಾತ್ರ ಅಭಿಮಾನ ಕಿಂಚಿತ್ತೂ ಮರೆಯಾಗಿಲ್ಲ. ಅದು ಮರೆಯಾಗುವಂತಹ ಅಭಿಮಾನವೇ ಅಲ್ಲ ಬಿಡಿ. ರಂಗಪಂಚಮಿ ಆಚರಣೆಯಲ್ಲಿಯೂ ಕೂಡ ಪುನೀತ್ ನೆನೆದು ಅಭಿಮಾನಿಗಳು ವಿಶೇಷವಾಗಿ ಗೌರವ ಸಮರ್ಪಣೆ ಮಾಡಿದರು.
ಅಪ್ಪುಗೆ ವಿಶೇಷ ಗೌರವ ಸಲ್ಲಿಸಿದ ಹುಬ್ಬಳ್ಳಿ ಜನ : ಬಣ್ಣದ ಹಬ್ಬದಲ್ಲಿ ಪುನೀತ್ ಸ್ಮರಣೆ - ಬಣ್ಣದ ಹಬ್ಬದಲ್ಲಿ ಪುನೀತ್ ಸ್ಮರಣೆ
ಅಭಿಮಾನಿಗಳು ಗೊಂಬೆ ಹೇಳುತೈತೆ....ಮತ್ತೇ ಹೇಳುತೈತೆ ನೀನೇ ರಾಜಕುಮಾರ್ ಹಾಡಿಗೆ ಅಪ್ಪು ಭಾವಚಿತ್ರ ಹಿಡಿದಿಕೊಂಡು ಡ್ಯಾನ್ಸ್ ಮಾಡುವ ಮೂಲಕ ವಿನೂತನವಾಗಿ ಆಚರಣೆ ಮಾಡಿದ್ದಾರೆ. ವಿದ್ಯಾನಗರದಲ್ಲಿ ಮಹಿಳೆಯರು, ಮಕ್ಕಳು, ಯುವಕ-ಯುವತಿಯರು ಪುನೀತ್ ರಾಜ್‍ಕುಮಾರ್ ಅವರ ಹಾಡಿಗೆ ಸಖತ್ ಸ್ಟೆಫ್ ಹಾಕುವ ಮೂಲಕ ಅಪ್ಪು ಮೇಲಿನ ಅಭಿಮಾನ ಎತ್ತಿ ತೋರಿಸಿದರು..
ಅಭಿಮಾನಿಗಳು ಗೊಂಬೆ ಹೇಳುತೈತೆ....ಮತ್ತೇ ಹೇಳುತೈತೆ ನೀನೇ ರಾಜಕುಮಾರ್ ಹಾಡಿಗೆ ಅಪ್ಪು ಭಾವಚಿತ್ರ ಹಿಡಿದಿಕೊಂಡು ಡ್ಯಾನ್ಸ್ ಮಾಡುವ ಮೂಲಕ ವಿನೂತನವಾಗಿ ಆಚರಣೆ ಮಾಡಿದ್ದಾರೆ. ವಿದ್ಯಾನಗರದಲ್ಲಿ ಮಹಿಳೆಯರು, ಮಕ್ಕಳು, ಯುವಕ-ಯುವತಿಯರು ಪುನೀತ್ ರಾಜ್‍ಕುಮಾರ್ ಅವರ ಹಾಡಿಗೆ ಸಖತ್ ಸ್ಟೆಫ್ ಹಾಕುವ ಮೂಲಕ ಅಪ್ಪು ಮೇಲಿನ ಅಭಿಮಾನ ಎತ್ತಿ ತೋರಿಸಿದರು.
ಕಿಕ್ ಕೊಟ್ಟ ರಂಗಪಂಚಮಿ : ಡಿಜೆ ಸಾಂಗ್ಗೆ ಸಖತ್ ಸ್ಟೆಫ್ಸ್:ಕಳೆದ ಎರಡು ವರ್ಷಗಳಿಂದ ಕಾಣಸಿಗದಿದ್ದ ರಂಗಪಂಚಮಿಯ ಆಚರಣೆ ರಂಗು ಪಡೆದಿದೆ. ಹುಬ್ಬಳ್ಳಿಯ ಜನರು ನವೀನ್ ಹೋಟೆಲ್ನಲ್ಲಿ ಡಿಜೆ ಹಾಡಿಗೆ ಸ್ಟೆಫ್ ಹಾಕುವ ಮೂಲಕ ಪರಸ್ಪರ ಬಣ್ಣ ಹಚ್ಚಿ ರಂಗಪಂಚಮಿ ಆಚರಣೆ ಮಾಡಿದರು. ಮಹಿಳೆಯರು, ಮಕ್ಕಳು, ಯುವಕರು ಹಾಗೂ ಯುವತಿಯರು ಸಖತ್ ಸ್ಟೆಫ್ ಹಾಕುವ ಮೂಲಕ ಎಂಜಾಯ್ ಮಾಡಿದರು.