ಧಾರವಾಡ :ಗ್ರಾಮ ಪಂಚಾಯತ್ ಚುನಾವಣಾ ಕಣ ರಂಗೇರುತ್ತಿದ್ದು, ದಂಪತಿಯೊಂದು ಪ್ರತ್ಯೇಕ ವಾರ್ಡ್ಗೆ ಸ್ಪರ್ಧೆ ನಡೆಸುತ್ತಿದೆ.
ತಾಲೂಕಿನ ಮುಗದ ಗ್ರಾಮದ ದ್ಯಾಮಣ್ಣ ಲಕ್ಕುಂಡಿ ಹಾಗೂ ಅವರ ಪತ್ನಿ ರೂಪಾ ಲಕ್ಕುಂಡಿ ಮುಗದ ಗ್ರಾಮ ಪಂಚಾಯತ್ ಅಖಾಡದಲ್ಲಿ ಚುನಾವಣೆ ಎದುರಿಸಲು ಸಜ್ಜಾಗಿದ್ದಾರೆ. ಮುಗದ ಗ್ರಾಮ ಪಂಚಾಯತ್ ವಾರ್ಡ್ ನಂಬರ 4ಕ್ಕೆ ದ್ಯಾಮಣ್ಣಾ ಸ್ಪರ್ಧೆ ಮಾಡಿದ್ರೆ, ಇತ್ತ ಅದೇ ಗ್ರಾಮದ ವಾರ್ಡ್ ನಂ.1ಕ್ಕೆ ಅವರ ಪತ್ನಿ ರೂಪಾ ಲಕ್ಕುಂಡಿ ಸ್ಪರ್ಧಿಸಿದ್ದಾರೆ.
ಪ್ರತ್ಯೇಕ ವಾರ್ಡ್ನಲ್ಲಿ ಪತಿ-ಪತ್ನಿ ಸ್ಪರ್ಧೆ ದ್ಯಾಮಣ್ಣಾ ಲಕ್ಕುಂಡಿ 2010ರ ಗ್ರಾಪಂ ಚುನಾವಣೆಯಲ್ಲಿ ಸ್ಪರ್ಧಿಸಿ ಪಂಚಾಯತ್ ಪ್ರವೇಶಿಸಿದ್ದರು. 2015ರ ಚುನಾವಣೆಯಲ್ಲಿ ಸೋತಿದ್ದರು. ಆದರೆ, ರೂಪಾ ಲಕ್ಕುಂಡಿ ಮೊದಲ ಬಾರಿಗೆ ಚುನಾವಣೆಯಲ್ಲಿ ಭಾಗವಹಿಸುತ್ತಿದ್ದಾರೆ.
ನಾವಿಬ್ಬರು ಜನಸೇವೆ ಮಾಡುವ ಉದ್ದೇಶದಿಂದ ಈ ಬಾರಿ ಚುನಾವಣೆಗೆ ಧುಮುಕಿದ್ದೇವೆ. ಜನರು ನಮ್ಮನ್ನು ಗೆಲ್ಲಿಸಿದ್ರೆ ಗ್ರಾಮದ ಅಭಿವೃದ್ಧಿಗೆ ಬೇಕಾದ ಕಾರ್ಯಗಳನ್ನು ಮಾಡುವ ಮೂಲಕ ಗ್ರಾಮಸ್ಥರಿಗೆ ನೆರವಾಗುತ್ತೇವೆ ಎಂದರು.