ಕರ್ನಾಟಕ

karnataka

ETV Bharat / state

ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡ ಟಾಪ್ ಸೀಡ್ ತಂಡ - Badminton Tournament

ಜಿಪಿಎಲ್ ಆರನೇ ಆವೃತಿಯ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಟಾಪ್ ಸೀಡ್ ತಂಡ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.

Badminton Tournament
ಜಿಪಿಎಲ್ ಆರನೇ ಆವೃತಿಯ ಬ್ಯಾಡ್ಮಿಂಟನ್ ಟೂರ್ನಿ

By

Published : Feb 12, 2020, 4:16 AM IST

ಹುಬ್ಬಳ್ಳಿ:ಕ್ಲಬ್ ರಸ್ತೆಯ ಜಿಮಖಾನ್​ ಕ್ಲಬ್​ನಲ್ಲಿ ನಡೆದ ಜಿಮಖಾನ್​ ಪ್ರೀಮಿಯರ್ ಲೀಗ್ (ಜಿಪಿಎಲ್) ಆರನೇ ಆವೃತಿಯ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಟಾಪ್ ಸೀಡ್ ತಂಡ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.

ಟಾಪ್ ಸೀಡ್ ಹಾಗೂ ಹಾಟ್ ಶಾಟ್ ತಂಡದ ಮಧ್ಯ ನಡೆದ ಫೈನಲ್ ಪಂದ್ಯದಲ್ಲಿ ಟಾಪ್ ಸೀಡ್ 3-2ರಲ್ಲಿ ಹಾಟ್ ಶಾಟ್ ಎದುರು ಗೆಲುವು ಸಾಧಿಸಿತು.

ಎ ವಿಭಾಗದಲ್ಲಿ ಟಾಪ್ ಸೀಡ್ ತಂಡದ ಮಯೂರ ಸಜ್ಜನ, ಬಿ 1 ವಿಭಾಗದಲ್ಲಿ ಹಾಟ್ ಶಾಟ್ ತಂಡದ ಕುಮಾರ ಹರಪ್ಪನಹಳ್ಳಿ, ಬಿ 2 ವಿಭಾಗದಲ್ಲಿ ಕೋಳಿವಾಡ ರಾಕ್ಸ್ ತಂಡದ ರಮೇಶ ಮಾಂಡ್ರೆ, ಬಿ 3 ವಿಭಾಗದಲ್ಲಿ ಹಾಟ್ ಶಾಟ್ ತಂಡದ ದೀಪಕ ಹಿರೇಮಠ ವೈಯಕ್ತಿಕ ಪ್ರಶಸ್ತಿ ಪಡೆದುಕೊಂಡರು.

ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್ ವಿಜೇತರಿಗೆ ಬಹುಮಾನ ವಿತರಿಸಿದರು. ಅತಿಥಿಗಳಾಗಿ ವಿಜೇತಾ, ನಂದಕುಮಾರ, ಕ್ಲಬ್‍ನ ಅಧ್ಯಕ್ಷ ಅರುಣ ನಾಯಕ, ಗಿರೀಶ ವೀಣಾ, ದಿನೇಶ ಶೆಟ್ಟಿ ಮೊದಲಾದರು ಇದ್ದರು.

ABOUT THE AUTHOR

...view details